Friday, December 13, 2024

Latest Posts

ಕಿಚ್ಚನಿಗಾಗಿ ಒಂದಾದ ಸೌತ್ ಇಂಡಿಯಾ..!

- Advertisement -

ಸೌತ್ ಸಿನಿರಂಗದಲ್ಲೀಗ ಸಿನಿಮಾಗಳ ಸೆನ್ಸೇಶನ್ ಬದಲಿಗೆ ಭಾಷೆಗಳ ಸಂಚಲನ ಜೋರಾಗಿದೆ. ಕಿಚ್ಚನ ಒಂದೇ ಒಂದು ಟ್ವೀಟ್ ಕನ್ನಡಿಗರನ್ನ ಒಗ್ಗಟ್ಟಾಗಿ ನಿಲ್ಲುವಂತೆ ಮಾಡಿದೆ. ಅಷ್ಟೇ ಅಲ್ಲ ಇಡೀ ಸೌತ್ ಇಂಡಿಯಾ ಒಂದಾಗಿ ನಿಂತಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವಿನ ಟ್ವೀಟ್ ಸಮರ ಈಗ ರಾಷ್ಟಿçÃಯ
ಮಟ್ಟದಲ್ಲಿ ಸದ್ದು ಮಾಡ್ತಿದೆ. ಇದಕ್ಕೆ ಕಾರಣ ಹಿಂದಿ ಭಾಷೆ ರಾಷ್ಟಿçÃಯ ಭಾಷೆಯಾಗಿ ಉಳಿದಿಲ್ಲ ಎಂಬ ಕಿಚ್ಚನ ಹೇಳಿಕೆ.

ಹೌದು, ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾಗಳ ಕುರಿತು ಮಾತನಾಡುವಾಗ ಹೇಳಿದ ಹೇಳಿಕೆ ಈಗ ವೈರಲ್ ಆಗಿದೆ. ಅದನ್ನೀಗ ನಟ ಅಜಯ್ ದೇವ್‌ಗನ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹಿಂದಿ ರಾಷ್ಟç ಭಾಷೆ ಹೌದೋ ಅಲ್ಲವೋ ಎಂಬುದರ ಬಗ್ಗೆ ಈಗ ದೇಶದಾದ್ಯಂತ ಚರ್ಚೆಯಾಗ್ತಿದೆ. ಉತ್ತರ ಭಾರತದಲ್ಲಿ ಹಿಂದಿ ಭಾಷೆ ಹೆಚ್ಚು ಪ್ರಾಬಲ್ಯವಿದೆ ಎಂದ ಮಾತ್ರಕ್ಕೆ ಹಿಂದಿ ರಾಷ್ಟç ಭಾಷೆ ಎನ್ನಲು ಸಾಧ್ಯವಿಲ್ಲ. ಈ ವಿಚಾರಕ್ಕೇನೇ ಈಗ ನಟ ಸುದೀಪ್ ಹಾಗೂ ನಟ ಅಜಯ್ ದೇವ್‌ಗನ್ ನಡುವೆ ವಾಗ್ವಾದ ಶುರುವಾಗಿದೆ. ಕಿಚ್ಚನ ಟ್ವೀಟ್‌ಗೆ ಟಾಂಗ್ ಕೊಟ್ಟ ಅಜಯ್ ದೇವ್‌ಗನ್ ಹಿಂದಿ ರಾಷ್ಟಿçÃಯ ಭಾಷೆ ಆಗಿತ್ತು, ಈಗಲೂ ಆಗಿದೆ , ಮುಂದೇನೂ ಇರುತ್ತೆ ಎಂದು ಹೇಳಿದರು. ಅಜಯ್ ದೇವ್‌ಗನ್‌ರ ಈ ಹೇಳಿಕೆಯನ್ನ ಇಡೀ ಕನ್ನಡಿಗರೇ ಸಹಿಸಲು ಅಸಾಧ್ಯವಾಂಯಿತು..ಅಷ್ಟೇ ಯಾಕೇ ಈ ಒಂದು ಸ್ಟೇಟ್‌ಮೆಂಟ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಂತೂ ನಿಜ. ಕನ್ನಡಿಗರು, ಕನ್ನಡ ಚಿತ್ರರಂಗದವರು ಮಾತ್ರವಲ್ಲದೇ ದಕ್ಷಿಣ ಭಾರತೀಯರೆಲ್ಲರೂ ಈಗ ಕಿಚ್ಚ ಪರ ನಿಂತಿದ್ದಾರೆ.

ಸುದೀಪ್ ಪರ ನಿಂತ ತಮಿಳು, ತೆಲುಗು ಫ್ಯಾನ್ಸ್..!

ಸುದೀಪ್ ಪ್ಯಾನ್ ಇಂಡಿಯಾ ಸ್ಟಾರ್..ಹೀಗಾಗಿ ಕಿಚ್ಚನಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಇದೀಗ ಈ ವಿಷಯದಲ್ಲೂ ತಮಿಳು ಹಾಗೂ ತೆಲುಗು ಅಭಿಮಾನಿಗಳೆಲ್ಲರೂ ಕಿಚ್ಚನ ಪರ ನಿಂತಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ವಿಜಯ್ ದಳಪತಿ, ಜೂ.ಎನ್‌ಟಿಅರ್ ಹಾಗೂ ಮಹೇಶ್ ಬಾಬು ಅಭಿಮಾನಿಗಳೆಲ್ಲರೂ ಕಿಚ್ಚನ ಪರ ಟ್ವಿಟ್ಟರ್‌ನಲ್ಲಿ ಧ್ವನಿಯೆತ್ತಿದ್ದಾರೆ. ಎಲ್ಲೆಡೆ ಇರುವಂತೆ ನಮ್ಮ ಸೌತ್ ಸಿನಿ ಇಂಡಸ್ಟಿçಯಲ್ಲೂ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಇದೆ. ಅದ್ರೆ ಈಗ ಅದನ್ನೆಲ್ಲಾ ಬದಿಗಿಟ್ಟು ಕಿಚ್ಚನಿಗೆ ಬೆಂಬಲ ನೀಡಿದ್ದಾರೆ. ಜೊತೆ ಕನ್ನಡ ಚಿತ್ರರಂಗದ ನಟನಟಿಯರೆಲ್ಲರೂ ನಟ ಸುದೀಪ್ ಬೆನ್ನಿಗೆ ನಿಂತಿದ್ದಾರೆ. ಕಿಚ್ಚನಿಗೆ ಈ ರೀತಿಯಾಗಿ ಅಜಯ್ ದೇವ್‌ಗನ್ ಟ್ವೀಟ್ ಬಂದ ಕೂಡಲೆ ಕನ್ನಡದ ಬಹುತೇಕ ತಾರೆಯರು ಕಿಚ್ಚನ ಪರವಾಗಿ ನಿಂತು ತಮ್ಮ ಭಾಷಾಭಿಮಾನ ತೋರಿದ್ದಾರೆ. ನಟಿ ರಮ್ಯಾ ಕಿಚ್ಚನ ಮಾತು ಸರಿ ಎಂದರೆ, ಇತ್ತ ನಟ ನಿನಾಸಂ ಸತೀಶ್ ದೇವ್‌ಗನ್ ವಿರುದ್ಧ ಗುಡುಗಿದ್ದಾರೆ. ಹೀಗೆ ಶ್ರೀನಗರ ಕಿಟ್ಟಿ, ಅಶಿಕಾ ರಂಗನಾಥ್. ಮಂಸೋರೆ ಸೇರಿದಂತೆ ಹಲವರು ಟ್ವೀಟ್ ಮಾಡಿ ಅಜಯ್ ದೇವ್‌ಗನ್ ಟ್ವೀಟ್‌ಗೆ ತಕ್ಕ ಉತ್ತರ ನೀಡಿದ್ದಾರೆ.

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss