Tuesday, November 4, 2025

Latest Posts

‘ಲಾಠಿ ಏಟು ಬಿದ್ದಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಪ್ರೀತಿಗೆ ಚಿರಋಣಿ’

- Advertisement -

ಬೆಂಗಳೂರು: ಅಂತೂ ಇಂತೂ ಚುನಾವಣೆ ಪ್ರಚಾರವೆಲ್ಲ ಮುಗಿದು, ಎಲ್ಲರೂ ಮತದಾನ ಮಾಡುವ ಸರದಿ ಬಂದಿದೆ. ಸೆಲೆಬ್ರಿಟಿಗಳೆಲ್ಲ ಆಯಾ ಪಕ್ಷದ ಪರ ಮತದಾನ ಮಾಡಿ ಬಂದಿದ್ದಾರೆ. ಕಿಚ್ಚ ಸುದೀಪ್ ಕೂಡ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದು, ಜನರಿಗೆ ಧನ್ಯವಾದ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಜನರನ್ನು ಕುರಿತು ಕವಿತೆ ಬರೆದಿದ್ದಾರೆ. ಜನರ ಕೊಟ್ಟ ಪ್ರೀತಿ ಬಗ್ಗೆ ಕವನ ಬರೆದ ಸುದೀಪ್, ಧನ್ಯವಾದ ಹೇಳಿದ್ದಾರೆ. ಅಲ್ಲದೇ, ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ಏಟು ಬಿದ್ದಿದ್ದರೆ, ಅದಕ್ಕೆ ಕ್ಷಮೆ ಇರಲಿ ಎಂದು ಕ್ಷಮೆಯನ್ನೂ ಕೇಳಿದ್ದಾರೆ.

ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ

ನನ್ನ ಬದುಕಿನ ರೀತಿ

ನಿಮ್ಮ ನಿರಂತರ ರಣಕೇಕೆ

ಸಾಕಿಷ್ಟು ಈ ಜನುಮಕೆ

ಹಣತೆ ಹೊತ್ತಿಸಿ, ಆರತಿ ಎತ್ತಿದಿರಿ

ದಾರಿಯುದ್ದಕ್ಕೂ ಹೂವ ಚೆಲ್ಲಿದಿರಿ

ನಿಮ್ಮ ಎದೆಯ ಮೇಲಿನ ಹಚ್ಚೆಯಂತೆ ಸದಾ ಜೊತೆಗಿರುವೆ

ಜನಸಾಗರದ ನೂಕುನುಗ್ಗಲಿನಲ್ಲಿ ಕೆಲವರಿಗೆ ಬಿದ್ದ ಲಾಠಿ ಏಟಿಗೆ ಕ್ಷಮೆ ಇರಲಿ

ಸ್ನೇಹಿತರೇ ನಿಮ್ಮ ಪ್ರತಿ ಮನದಲ್ಲಿ ಈ ಪ್ರೀತಿ ಹೀಗೆ ಇರಲಿ

ಕರುನಾಡನಲ್ಲಿ ನಡೆದ ಈ ಮೆರವಣಿಗೆಯುದ್ದಕ್ಕೂ ಜೊತೆಯಾಗಿ ಸಾಗಿದ

ಮಾಧ್ಯಮ ಮಿತ್ರರಿಗೆ- ಕಾಳಜಿಯಿಂದ ಕಾವಲಿಟ್ಟ ಪೊಲೀಸರಿಗೆ

ಮಿಲಿಟರಿ ಕಮಾಂಡೋ ಸಿಬ್ಬಂದಿಗೆ

ಲಕ್ಷಾಂತರ ಕಾರ್ಯಕರ್ತರಿಗೆ ಮತ್ತು ಹೃದಯಗೀತೆಯಾದ ನನ್ನ ಪ್ರೀತಿಯ ಸ್ನೇಹಿತರಿಗೆ ಚಿರಋಣಿ

 ಪ್ರೀತಿಯಿಂದ ನಿಮ್ಮ ಕಿಚ್ಚ ಸುದೀಪ್

Luv u alllll

ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

- Advertisement -

Latest Posts

Don't Miss