ನಟ ಡಾ.ವಿಷ್ಣುವರ್ಧನ್ ಪುಣ್ಯಭೂಮಿಯ ಬಗ್ಗೆ ಡಿಸಿಎಂ ಡಿಕೆಶಿ ಜೊತೆ ಚರ್ಚಿಸಿದ ಕಿಚ್ಚ ಸುದೀಪ್

Movie News: ದಿವಂಗತ ನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ಬಗ್ಗೆ ಹಲವಾರು ಚರ್ಚೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್, ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಟ್ವೀಟ್ ಮಾಡಿದ್ದರು.

ಅಲ್ಲದೇ, ನಿನ್ನೆ ಡಿಸಿಎಂ ಡಿಕೆಶಿ ಜೊತೆಯೂ, ನಟ ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಯನ್ನು ಹಾಗೆ ಬಿಡಬೇಕು ಮತ್ತು ಹತ್ತು ಗುಂಟೆ ಜಮೀನು ನೀಡಲು ಸಹಕರಿಸಬೇಕು ಎಂದು ಸುದೀಪ್ ಡಿಕೆಶಿ ಬಳಿ ಮನವಿ ಮಾಡಿದ್ದಾರೆ.

ನಟ ಬಾಲಣ್ಣ ಮತ್ತು ವಿಷ್ಣು ಅಭಿಮಾನಿಗಳ ನಡುವೆ ಈ ಬಗ್ಗೆ ಗೊಂದಲವಿದೆ. ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಯನ್ನು ನೆಲಸಮ ಮಾಡಬೇಕು ಎಂದು ಬಾಲಣ್ಣ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆಂದು, ವಿಷ್ಣು ಅಭಿಮಾನಿ ದೂರಿದ್ದಾರೆ. ಅಲ್ಲದೇ, ಈ ಜಾಗ ಪಿತ್ರಾರ್ಜಿತ ಆಸ್ತಿಯಲ್ಲ. ಸರಕಾರ ಕೊಟ್ಟಿದ್ದು, ಹಾಗಾಗಿ ನಾವೂ ಕೂಡ, ವಿಷ್ಣು ಪುಣ್ಯಭೂಮಿ ನೆಲಸಮವಾಗಲು ಬಿಡುವುದಿಲ್ಲವೆಂದು ಹೇಳಿದ್ದಾರೆ.

ಶೆಟ್ಟರ್‌ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?

ತಾನು ಓದಿದ ಕೆರಾಡಿ ಶಾಲೆಯನ್ನೇ ದತ್ತು ಪಡೆದ ನಟ ರಿಷಬ್ ಶೆಟ್ಟಿ

ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ: ಕೋವಿಡ್ ಬಗ್ಗೆ ಸಿಎಂ ಮಾತು

About The Author