Saturday, November 29, 2025

Latest Posts

ಶೋಕಿ ಮಾಡಲು ಬೈಕ್ ಕಳ್ಳತನ ಮಾಡುತ್ತಿದ್ದ ಕಿಲಾಡಿ ಕಳ್ಳ ಶಂಕರ್ ಕಂಬಿ ಹಿಂದೆ

- Advertisement -

Hubballi News: ಹುಬ್ಬಳ್ಳಿ : ಹೀಗೆ ಫೋಟೋದಲ್ಲಿ ಮಳ್ಳನ ಹಾಗೆ ಕಾಣುತ್ತಿರೋ ಈತನ ಹೆಸರು ಶಂಕರ. ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನಿವಾಸಿ. ಶೋಕಿಲಾಲ ಆಗಿದ್ದ ಶಂಕರ, ಕಷ್ಟ ಪಟ್ಟು ದುಡಿಯದೆ ದುಡ್ಡು ಗಳಿಸುವ ಸಲುವಾಗಿ ಬೈಕ್‌ ಕಳ್ಳತನಕ್ಕೆ ಇಳಿದಿದ್ದ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಮೊದಲು ಕದ್ದ ಬೈಕ್ ನಿಂದ ಕೈತುಂಬಾ ದುಡ್ಡು ಬಂದ ನಂತರ ಶಂಕರ ಕಿಮ್ಸ್ ಆಸ್ಪತ್ರೆಯ ಹಾಗೂ ನಗರದ ವಿವಿಧ ಕಡೆಗಳಲ್ಲಿ ರಾಯಲ್ ಎನ್ನೀಲ್ಡ್ ಬೈಕ್ ಸೇರಿದಂತೆ 15 ಬೈಕ್ ಕಳ್ಳತನ ಮಾಡಿದ್ದ.

ಈ ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹು-ಧಾ ಅಪರಾಧ ವಿಭಾಗದ ಡಿಸಿಪಿ ರವೀಶ ಹಾಗೂ ಎಸಿಪಿ ಬಿ. ನಂದಗಾವಿ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ವಿದ್ಯಾನಗರ ಠಾಣೆ ಇನ್ಸೆಕ್ಟರ್ ಜಯಂತ ಹಾಗೂ ಪಿಎಸ್‌ಐ ಶ್ರೀಮಂತ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿ ಶಂಕರ ಬೈಕ್ ಕಳ್ಳತನ ಮಾಡಿಕೊಂಡು ಹೋಗುವಾಗ ಸಾಯಿನಗರ ಬಳಿ ಬಂಧನ ಮಾಡಲಾಗಿದೆ.

ಸದ್ಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬೈಕ್ ಕಳ್ಳತನ ಮಾಡಿ ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಯ ಸಂಬಂಧಿಕರ ಹಾಗೂ ಸಿಬ್ಬಂದಿ ನಿದ್ದೆ ಕೆಡಿಸಿದ್ದ ಖತರ್ನಾಕ ಕಳ್ಳ ಶಂಕರನನ್ನು ವಿದ್ಯಾನಗರ ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ. ಖಾಕಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡ ಟೀಂ ಇಂಡಿಯಾ ಆಟಗಾರರು..

ರಾಮಮಂದಿರ ಉದ್ಘಾಟನೆಗೆ ಹೋಗಲಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಜಗ್ಗಿ ವಾಸುದೇವ್

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

- Advertisement -

Latest Posts

Don't Miss