Saturday, April 19, 2025

Latest Posts

ವೈರಲ್ ಆಯ್ತು ಕೆ.ಎಲ್. ರಾಹುಲ್ ಆ ಒಂದು ಪೋಸ್ಟ್…!

- Advertisement -

Sports News:

ಕೆ.ಎಲ್ ರಾಹುಲ್ ಆ ಒಂದು ಪೋಸ್ಟ್ ಸಧ್ಯ ಫುಲ್ ವೈರಲ್ ಆಗಿದೆ. ಶ್ರೀಲಂಕಾ ವಿರುದ್ದ ನಿನ್ನೆ ನಡೆದ ಕೊನೆಯ ಟಿ 20 ಪಂದ್ಯದಲ್ಲಿ ಭಾರತ ತಂಡ 91 ರನ್‌ಗಳಿಂದ ಗೆದ್ದು ಬೀಗಿತ್ತು. ಪಂದ್ಯದಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸೂರ್ಯಕುಮಾರ್ ಯಾದವ್ ಅವರಿಗೆ ಕೆ.ಎಲ್. ರಾಹುಲ್ ತುಳುವಿನಲ್ಲೇ ಅಭಿನಂದಿಸಿದ್ದಾರೆ. ಇನ್ನು ಈ ಅಭಿನಂದನೆಗೆ ಯಾದವ್ ಪತ್ನಿ ತುಳುವಿನಲ್ಲೇ ಪ್ರತಿಕ್ರಿಯಿಸಿದ್ದು, ಇಬ್ಬರ ತುಳು ಸಂಭಾಷಣೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ರಾಂತಿಯಲ್ಲಿರುವ ಮಂಗಳೂರು ಮೂಲದ ಕೆ.ಎಲ್. ರಾಹುಲ್ ಅವರು ಸೂರ್ಯ ಕುಮಾರ್ ಯಾದವ್ ಅವರ ಅದ್ಬುತ ಬ್ಯಾಟಿಂಗ್ ಪ್ರದರ್ಶನಕ್ಕೆ ತುಳುವಿನಲ್ಲೇ ಶುಭ ಹಾರೈಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೂರ್ಯಕುಮಾರ್ ಯಾದವ್ ಮೈದಾನದಲ್ಲಿರುವ ಫೋಟೋ ಹಾಕಿ ಪೋಸ್ಟ್ ಮಾಡಿರುವ ಕೆ.ಎಲ್. ರಾಹುಲ್, ’ಬಾರೀ ಎಡ್ಡೆ ಗೊಬ್ಬಿಯಾ’ ಎಂದು ಬರೆದುಕೊಂಡಿದ್ದರು.

ಇನ್ನು ಇದೇ ಇನ್‌ಸ್ಟಾಗ್ರಾಂ ಸ್ಟೋರಿಯ ಸ್ಕ್ರೀನ್‌ಶಾಟ್‌ನ್ನು ತೆಗೆದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿರುವ ಸೂರ್ಯಕುಮಾರ್ ಯಾದವ್ ಅವರ ಪತ್ನಿ, ಮೂಲತಃ ಮಂಗಳೂರಿನವರಾದ ದೇವಿಶಾ ಶೆಟ್ಟಿ, ’ಚೂರು ತುಳು ಕಲ್ಪಾವೊಡ್ ಆರೆಗ್ ನನ’ (ಅವರಿಗಿನ್ನು ಸ್ವಲ್ಪ ತುಳು ಕಲಿಸಬೇಕು) ಎಂದು ಬರೆದಿದ್ದರು ಎನ್ನಲಾಗಿದೆ.

65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ದಿವ್ಯಾ ಟಿಎಸ್

ಮೀಡಿಯಾ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಮಹಿಳಾ ಪೂರ್ವ ವಿಭಾಗ ಹಾಗೂ ಪ್ರೆಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ ಪ್ರದಾನ

ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ ನಾರಾಯಣಗೌಡ

- Advertisement -

Latest Posts

Don't Miss