Thursday, December 26, 2024

Latest Posts

ಊಟದ ನಂತರ ಟೀ ಕುಡಿದರೆ ಆಗುವ ಪರಿಣಾಮ ತಿಳಿಯಿರಿ.!

- Advertisement -

ದಿನವನ್ನು ಶುರು ಮಾಡಲು ಅಥವಾ ಇಡೀ ದಿನದ ಆಯಾಸವನ್ನು ನಿವಾರಿಸಲು ಟೀ ಮೊರೆ ಹೋಗುವ ಹಲವು ಜನರಿದ್ದಾರೆ. ಹಾಗಾಗಿ ಈ ಅಭ್ಯಾಸವನ್ನು ಇಂದಿನಿಂದಲೇ ಬದಲಾಯಿಸಿ. ಯಾಕಂದ್ರೆ ಟೀಯಲ್ಲಿರುವ ಕೆಫೀನ್ ದೇಹದಲ್ಲಿ ಕಾರ್ಟಿಸೋಲ್ ಅಥವಾ ಸ್ಟೀರಾಯ್ಡ್ ಹಾರ್ಮೋನ್ ಅನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಅದರಲ್ಲೂ ಕಾಫಿ ಕುಡಿಯುವವರ ಸಂಖ್ಯೆಗಿಂತ, ಚಹಾ ಕುಡಿಯುವ ಮಂದಿ ಜಾಸ್ತಿ ಇರುತ್ತಾರೆ.

ನಾವು ಯಾವುದೇ ಆಹಾರ ಸೇವನೆ ಮಾಡುವ ಮುನ್ನ ಹಾಗೂ ಆಹಾರ ಸೇವನೆ ಮಾಡಿದ ನಂತರ ಟೀ ಕುಡಿಯುವುದು ನಮ್ಮ ಆರೋಗ್ಯದ ಮೇಲೆ ಹಲವು ರೀತಿಯ ಅಡ್ಡಪರಿಣಾಮಗಳನ್ನು ಬೀರುತ್ತದೆ. ಮಧ್ಯಾಹ್ನ ಊಟವಾದ ಕೂಡಲೇ ಕೆಲವರಿಗೆ ಬಿಸಿ ಬಿಸಿ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಈ ಅಭ್ಯಾಸಗಳು ಹೆಚ್ಚಾಗಿ ನಾವು ಹಳ್ಳಿಯಲ್ಲಿರುವ ಜನರಲ್ಲಿ ನೋಡಬಹುದು. ಆದರೆ ಈ ಅಭ್ಯಾಸ ಯಾವತ್ತಿಗೂ ಒಳ್ಳೆಯದಲ್ಲ. ಅದಷ್ಟೇ ಅಲ್ಲದೆ ಕಚೇರಿಗಳಲ್ಲಿ ದುಡಿಯುವವರು ಅಥವಾ ಮನೆಯಲ್ಲಿ ಇರುವವರು ಕೂಡ ಅಷ್ಟೇ, ಊಟ ಮಾಡಿದ ತಕ್ಷಣ ಒಂದು ಕಪ್ ಟೀ ಕುಡಿಯುವ ಅಭ್ಯಾಸ ಇಟ್ಟು ಕೊಂಡಿರುತ್ತಾರೆ.

ಇದರಿಂದ ನಮ್ಮ ರಕ್ತದಲ್ಲಿ ಪಾಲಿಫಿನಾಲ್ ಹಾಗೂ ಟ್ಯಾನಿನ್ ಎನ್ನುವ ಸಂಯುಕ್ತ ಅಂಶಗಳ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ, ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಿಂದ, ನಮಗೆ ಸಿಗಬಹುದಾದ ಕಬ್ಬಿಣಾಂಶ, ದೇಹಕ್ಕೆ ಸೇರದಂತೆ ಮಾಡುತ್ತದೆ. ಇದರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗಿ ರಕ್ತಹೀನತೆ ಸಮಸ್ಯೆ ಬರುವ ಸಾಧ್ಯತೆ ಇದೆ.

ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆಯದೇ, ಕೊನೆಗೆ ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳು ಕೂಡ ಕಂಡುಬರಬಹುದು. ಹಾಗಾಗಿ ಊಟ ಆದ ತಕ್ಷಣ ಟೀ ಕುಡಿಯುವ ಅಭ್ಯಾಸ ಯಾರಿಗೆಲ್ಲಾ ಇದೆಯೋ, ಅಂತಹವರು ಅದನ್ನು ಬಿಟ್ಟು ಬಿಡುವುದು ಒಳ್ಳೆಯದು.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss