ಮುಂದೆ ನಡೆಯುವ ಅನಾಹುತದ ಬಗ್ಗೆ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ. ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಮಳೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ ಮಾಸದಲ್ಲಿ ಮಳೆ ಸುರಿಯುವ ಬಗ್ಗೆ, ಪ್ರಕೃತಿ ವಿಕೋಪದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ನೀವು ಶ್ರೀಮಂತರಾಗಬೇಕು ಅಂದ್ರೆ, ಚಾಣಕ್ಯ ಹೇಳಿರುವ ಈ ನಿಯಮಗಳನ್ನು ಫಾಲೋ ಮಾಡಿ..
ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಿಸಿತು ಎಂದು ಅವರ ರೀತಿಯಲ್ಲೇ ಭವಿಷ್ಯ ನುಡಿದಿದ್ದಾರೆ. ಇದರ ಅರ್ಥವೇನೆಂದರೆ, ಬರುವ ಕಾರ್ತಿಕ ಮಾಸದಲ್ಲಿ ಮಳೆ ಜೋರಾಗಿ ಬರಲಿದೆ. ಈ ಕಾರಣಕ್ಕೆ ಜನ ಜೀವನ ಅಸ್ತವ್ಯಸ್ತವಾಗಲಿದೆ. ಪ್ರವಾಹ ಬರಲೂ ಬಹುದು ಎಂದು ತಮ್ಮ ಭವಿಷ್ಯದ ಮೂಲಕ ಕೋಡಿಶ್ರೀ ಎಚ್ಚರಿಕೆ ನೀಡಿದ್ದಾರೆ.
ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..
ಅಲ್ಲದೇ, ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಧರ್ಮ ದಂಗಲ್ ಬಗ್ಗೆ ಮಾತನಾಡಿರುವ ಕೋಡಿಶ್ರೀ, ಜನರಲ್ಲಿ ಜ್ಞಾನದ ಶಕ್ತಿ ಕಡಿಮೆಯಾಗಿದೆ. ಜನ ಬುದ್ಧಿವಂತಿಕೆ ಉಪಯೋಗಿಸದ ಕಾರಣ, ದೇಶದಲ್ಲಿ ಈ ರೀತಿ ಜಗಳಗಳಾಗುತ್ತಿದೆ. ಅಶಾಂತಿ ನೆಲೆಸುತ್ತಿದೆ ಎಂದು ಹೇಳಿದ್ದಾರೆ.
ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..
ಇನ್ನು ಮಠದಲ್ಲಿ ಪಂಚಾಗ್ನಿ ನಡೆಯುವ ಸಂದರ್ಭದಲ್ಲಿ ಅಗ್ನಿ ಕುಂಡ ಒಡೆದಿದೆ. ಈ ಕಾರಣಕ್ಕೆ ಪೂಜೆಯನ್ನು ಪೂರ್ತಿ ಮಾಡಲಾಗಲಿಲ್ಲ. ಆಗ ಶ್ರೀಗಳು ರಾಜ್ಯದಲ್ಲಿ ಮುಂದೆ ಅಗ್ನಿ ಅವಘಡ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.