Sports News: ಕ್ಯಾಪ್ಟನ್ ಕೊಹ್ಲಿ ಹೆಚ್ಚಾಗಿ ಕ್ರಿಕೇಟ್ ವಿಷಯದಲ್ಲಿ ಸುದ್ದಿಯಾಗ್ತಾರೆ. ಆದ್ರೆ ಈ ಬಾರಿ ವಿರಾಟ್ ಸುದ್ದಿಯಾಗಿರೋದು, ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಫೋಟೋಗಳಿಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಪ್ರಮೋಟ್ ಮಾಡುವ ಪೋಸ್ಟ್‌ಗಳಿಗೆ ಹಣ ಪಡೆಯಲಾಗುತ್ತದೆ. ಅದೇ ರೀತಿ ವಿರಾಟ್ ಕೂಡ ಪ್ರಮೋಷನ್ ಫೋಟೋಗಳಿಗೆ ಹಣ ಪಡೆಯುತ್ತಾರೆ. ಇವರು ಒಂದು ಪ್ರಮೋಷನ್ ಫೋಟೋ ಅಥವಾ ವೀಡಿಯೋಗೆ, 14 ಕೋಟಿ ರೂಪಾಯಿ ಪಡೆಯುತ್ತಾರೆ. ಹಾಗಾಗಿ ಭಾರತದಲ್ಲಿ ಬ್ಲಾಗಿಂಗ್ ಪ್ರಮೋಷನ್‌ಗೆ ಅತೀ ಹೆಚ್ಚು ಹಣ ಪಡೆಯುವ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.
ಇನ್ನು ವಿಶ್ವದಲ್ಲಿ ಇನ್‌ಸ್ಟಾ ಪೋಸ್ಟ್‌ಗೆ ಅತೀ ಹೆಚ್ಚು ಸಂಭಾವನೆ ಪಡೆಯುುವರಲ್ಲಿ, ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಮೊದಲನೇಯವಾಗಿದ್ದು, ಲಿಯೋನೆಲ್ ಮೆಸ್ಸಿ ಎರಡನೇಯವರಾಗಿದ್ದಾರೆ. ರೊನಾಲ್ಡೋ ಒಂದು ಪ್ರಮೋಷನ್ ಪೋಸ್ಟ್‌ಗೆ 26 ಕೋಟಿ ರೂಪಾಯಿ ಪಡೆಯುತ್ತಾರೆ. ಮೆಸ್ಸಿ ಒಂದು ಇನ್‌ಸ್ಟಾ ಪ್ರಮೋಷನ್ ಪೋಸ್ಟ್‌ಗೆ 21 ಕೋಟಿ ರೂಪಾಯಿ ಪಡೆಯುತ್ತಾರೆ.
ಬ್ಲಾಗಿಂಗ್ ಪ್ರಮೋಷನ್‌ಗೆ ಯಾರ್ಯಾರು ಎಷ್ಟು ಹಣ ಪಡೆಯುತ್ತಾರೆ ಎಂಬ ಪಟ್ಟಿಯಲ್ಲಿರುವ ಟಾಪ್ 20ಯಲ್ಲಿ ವಿರಾಟ್ ಸ್ಥಾನ ಪಡೆದಿದ್ದಾರೆ. ವಿರಾಟ್ ಅಷ್ಟೇ ಅಲ್ಲದೇ, ನಟಿ ಪ್ರಿಯಾಂಕಾ ಛೋಪ್ರಾ, 29ನೇ ಸ್ಥಾನವನ್ನು ಪಡೆದಿದ್ದಾರೆ. ಇವರು ಒಂದು ಪೋಸ್ಟ್‌ಗೆ 4 ಕೋಟಿ ರೂಪಾಯಿ ಪಡೆಯುತ್ತಾರೆ.
ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?




