- Advertisement -
ಕ್ರಿಕೆಟ್ ದಿಗ್ಗಜ, ಅಪಾರ ಅಭಿಮಾನಿಗಳನ್ನು ಹೊ0ದಿರುವ ವಿರಾಟ್ ಕೊಹ್ಲಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ. ಆ ವಿಚಾರವೇನೆಂದರೆ ಟೆಸ್ಟ್ ತಂಡದ ನಾಯಕತ್ವಕ್ಕೆ ಬಹಿರಂಗವಾಗಿ ರಾಜಿನಾಮೆಯನ್ನು ನೀಡಿದ್ದಾರೆ.
ಇದರೊಂದಿಗೆ ಕೊಹ್ಲಿ ಭಾರತ ತಂಡದ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಹೊರಗುಳಿದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕಾಏಕಿ ಟಿ20 ತಂಡದ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು ಈಗ ಮತ್ತೆ ಅಭಿಮಾನಿಗಳಿಗೆ ಕಹಿ ವಿಚಾರವನ್ನು ನೀಡಿದ್ದಾರೆ. ಕೊಹ್ಲಿನಾಯಕತ್ವದಲ್ಲಿ ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿ ನಂಬರ್ ಒನ್ ಸ್ಥಾನವನ್ನು ಗಳಿಸಿದೆ ಆದರೆ ಇಂದು ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜಿನಾಮೆ ಘೋಷಿಸಿರುವುದು ಎಲ್ಲರಿಗೂ ಬೇಜಾರದ ವಿಷಯವಾಗಿದೆ.
- Advertisement -