Sunday, April 13, 2025

Latest Posts

Kolara; ಕೋಲಾರದಲ್ಲಿ ಬಂದ್ ಗೆ ಒಳ್ಳೆಯ ಪ್ರತಿಕ್ರಿಯೆ.!

- Advertisement -

ಕೋಲಾರ : ಇಂದು ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ವಿವಿಧ ಸಂಘಟನೆಗಳಿಂದ ಶಾಂತಿಯುತ ಪ್ರತಿಭಟನೆ ಕೈಗೊಂಡರು. ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡದಂತೆ ನಗರದಲ್ಲಿಂದು ವಿವಿಧ ಸಂಘಟನೆಯ ಕಾರ್ಯಕರ್ತರು ಪಲ್ಲವಿ ವೃತ್ತದಲ್ಲಿ ರಸ್ತೆಯ ಮದ್ಯೆ ಕುಳಿತು ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಇದೆ ವೇಳೆ ಪ್ರತಿಭಟನಾಕಾರರಿಂದ ಯಾವುದೇ ರೀತಿಯ ಅಹಿತಕರ  ಘಟನೆ ಸಂಭವಿಸದಂತೆ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.

ಬಂದ್ ಹಿನ್ನೆಲೆ ಜಿಲ್ಲೆಯಾದ್ಯಂತ ಕಡಿಮೆ ಪ್ರಮಾಣದಲ್ಲಿ ಸಾರಿಗೆ ಸಂಚಾರ ಮತ್ತು ಆಟೋ ಸಂಚಾರ ಸೌಲಭ್ಯ ಲಭ್ಯವಾಗಿದೆ. ಹಾಗೂ ಪ್ರತಿಭಟನಾಕಾರರು ಯಾರಿಗೂ ಸಹ ಬಲವಂತವಾಗಿ ಬಂದ್ ಮಾಡಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿತ್ತು.

Haveri Bus stand: ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಬೆಂಡೆತ್ತಿದ ಧೀರ ನಾರಿ..!

ಕರ್ನಾಟಕ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ – ಜಿಲ್ಲಾಧಿಕಾರಿ ಸ್ಫಷ್ಟನೆ..

Cauvery Water : ಕಾವೇರಿ ಕಿಚ್ಚು ಕರ್ನಾಟಕ ಬಂದ್: ರಾಜ್ಯಾದ್ಯಂತ ಎಲ್ಲೆಲ್ಲಿ ಏನೇನಾಯ್ತು..?!

- Advertisement -

Latest Posts

Don't Miss