ಶಾಂಗ್ರಿಲಾ ಹೋಟೆಲ್ ಸಭೆಯ ರಹಸ್ಯ ಬಿಚ್ಚಿಟ್ಟ ಕೋನರೆಡ್ಡಿ!

ಬಯಲು ನಾಟಕ ನೋಡಲು ಹೋದವರ ಬದುಕಿನಲ್ಲಿ ಭೀಕರ ದುರಂತ ಸಂಭವಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೈಲ್ ಮರ್ಚೇಡ್ ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ನಿನ್ನೆ ರಾತ್ರಿ ಗ್ರಾಮದಲ್ಲಿ ಬಯಲು ನಾಟಕ ಆಯೋಜಿಸಲಾಗಿತ್ತು. ಕುಟುಂಬ ಸಮೇತ ದೊಡ್ಡ ಸಂಖ್ಯೆಯಲ್ಲಿ ಜನರು ನಾಟಕ ವೀಕ್ಷಣೆಗೆ ಆಗಮಿಸಿದ್ದರು. ಇದೇ ವೇಳೆ ಸಮುದಾಯ ಭವನದ ಅನುದಾನದ ಬೋರ್ಡ್ ಬರೆಯಲು ತಾತ್ಕಾಲಿಕವಾಗಿ ನಿರ್ಮಿಸಿದ್ದ ಛತ್ತು ಏಕಾಏಕಿ ಕುಸಿದು ಬಿದ್ದಿದೆ. ಛತ್ತಿನ ಕೆಳಗೆ ನಿಂತಿದ್ದ ಮಕ್ಕಳು ಮತ್ತು ಮಹಿಳೆಯರು ಅವಶೇಷಗಳಡಿ ಸಿಲುಕಿಕೊಂಡು ಈ ದುರಂತ ಸಂಭವಿಸಿದೆ.

ಈ ಅವಘಡದಲ್ಲಿ ವಿಶ್ವನಾಥ (8) ಮತ್ತು ಮನ್ವಿತಾ (1.5) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮತ್ತೊಬ್ಬರಾದ ವಿಶಾಲಮ್ಮ (22) ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ಚಿಕಿತ್ಸೆಯಲ್ಲಿ ಇದ್ದಾರೆ. ಬಸಮ್ಮ (38) ಮತ್ತು ಲಕ್ಷ್ಮೀ ಹನುಂತ್ರಾಯ (16) ಅವರಿಗೆ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರ ಕಾಲುಗಳನ್ನು ಕತ್ತರಿಸುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಇತರ ಗಾಯಾಳುಗಳಿಗೂ ಹಲವು ಮಟ್ಟದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.

ಮೃತ ಮಕ್ಕಳನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರದ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಗೆ ಕಳಪೆ ಕಾಮಗಾರಿ ಕಾರಣ ಎನ್ನುವ ಆರೋಪ ಗ್ರಾಮದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಸಮುದಾಯ ಭವನದ ಅನುದಾನದ ಬೋರ್ಡ್ ಬರೆಯಲು ನಿರ್ಮಿಸಿದ್ದ ಛತ್ತಿಗೆ ಸರಿಯಾದ ಗುಣಮಟ್ಟದ ಕಾಮಗಾರಿ ನಡೆದಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಟ್ಟಡ ಭದ್ರತೆ ಬಗ್ಗೆ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author