Koppala News: ಕೊಪ್ಪಳದ ತಹಸಿಲ್ದಾರ್ ಕಚೇರಿಯ ಒಳಾಂಗಣದಲ್ಲಿ ಸ್ವಚ್ಛತೆಯ ಕೊರತೆ: ಜನರಿಂದ ಛೀಮಾರಿ

Koppala News: ಕೊಪ್ಪಳದ ತಹಸಿಲ್ದಾರ್ ಕಚೇರಿಯ ಒಳಾಂಗಣದಲ್ಲಿ ಸ್ವಚ್ಛತೆಯ ಕೊರತೆ ಸ್ಪಷ್ಟವಾಗಿ ಕಂಡುಬಂದಿದೆ. ಕಚೇರಿಯ ಆವರಣದಲ್ಲಿ ಕಸ ತುಂಬಿಕೊಂಡಿದ್ದು ಎಲ್ಲಿ ನೋಡಿದರೂ ಅಲ್ಲಿ ಕಸ ಕಾಣುತ್ತಿದೆ ಎಂದು ಸಾರ್ವಜನಿಕರ ದೂರುತ್ತಿದ್ದಾರೆ.

ಕಚೇರಿಗೆ ಬರುವ ಸಾರ್ವಜನಿಕರು ಅಸ್ವಚ್ಛತೆಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಕಸ ಇರುವುದಷ್ಟೇ ಅಲ್ಲದೇ, ಸಾರ್ವಜನಿಕ ಶೌಚಾಲಯ ಕೂಡ ದುರ್ವಾಸನೆಯಿಂದ ಕೂಡಿದೆ. ಶೌಚಾಲಯ ಬಳಕೆಗೂ ಅರ್ಹವಾಗಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.

ತಕ್ಷಣವೇ ತಹಸಿಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ಕಚೇರಿಯ ಆವರಣ ಮತ್ತು ಶೌಚಾಲಯಗಳ ಸ್ವಚ್ಛತೆಯ ಕ್ರಮಬದ್ಧವಾಗಿ ನಿರ್ವಹಿಸುವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.

About The Author