- Advertisement -
ಪಾಟ್ನಾ: ಬಿಹಾರದ ಪಾಟ್ನಾದಲ್ಲಿನ ನಳಂದಾ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 72ಕ್ಕೂ ಅಧಿಕ ವೈದ್ಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಸೋಮವಾರ 72 ವೈದ್ಯರಿಗೆ ಕೋವಿಡ್-19 ಪತ್ತೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು 159 ವೈದ್ಯರು ಸೋಂಕಿಗೆ ಒಳಪಟ್ಟಿದ್ದಾರೆ ಎಂದು ಆಸ್ಪತ್ರೆ ಮಹಾನಿರ್ದೇಶಕ ಡಾ.ಬಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೋವಿಡ್ ಸೋಂಕಿನಿಂದ 87 ವೈದ್ಯರು ಆಸ್ಪತ್ರೆಯಲ್ಲಿರುವುದಾಗಿ ಪಾಟ್ನಾ ಡಿಎಂ ಚಂದ್ರಶೇಕರ್ ಸಿಂಗ್ ಭಾನುವಾರ ತಿಳಿಸಿದ್ದರು. ಇವರೆಲ್ಲರಿಗೂ ರೋಗ ಲಕ್ಷಣ ರಹಿತರಾಗಿದ್ದಾರೆ ಅಥವಾ ಸೌಮ್ಯ ಗುಣಲಕ್ಷಣ ಹೊಂದಿದ್ದು, ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಬಿಹಾರದಲ್ಲಿ 1,386 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.
- Advertisement -