Thursday, July 31, 2025

Latest Posts

‘ಬದುಕು ಮತ್ತು ಭವಿಷ್ಯವನ್ನು ಹಾಳುಮಾಡಿದವರನ್ನು ದೂರವಿಡಬೇಕು ‘

- Advertisement -

ಕೆಆರ್ ಪುರ: ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಮೋಹನ್ ಬಾಬು ಪರ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.

ವಿಜಿನಾಪುರ ವಾರ್ಡ್ , ಹೊರಮಾವು ವಾರ್ಡ್ ರಾಮಮೂರ್ತಿನಗರ ವಾರ್ಡ್ ಗಳ ಪ್ರಮುಖ ರಸ್ತೆಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು. ಬಿಜೆಪಿ ಪಕ್ಷದ ಸರ್ಕಾರದ ಅವಧಿಯಲ್ಲಿ ಬಡ ಮಧ್ಯಮ ವರ್ಗದ ಜನರ ಬದುಕನ್ನು ಹೀನಾಯ ಸ್ಥಿತಿಗೆ ತಲುಪಿಸಿದ್ದಾರೆ, ಬದುಕು ಮತ್ತು ಭವಿಷ್ಯವನ್ನು ಹಾಳುಗೆಡವಿದ್ದಾರೆ ಅಂತಹವರನ್ನು ದೂರವಿಡಬೇಕು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ 200 ಯೂನಿಟ್ ವಿದ್ಯುತ್, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಗೃಹಲಕ್ಷ್ಮಿಯರಿಗೆ 2000, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹತ್ತು ಹಲವು ಯೋಜನೆಗಳು ನಿಮ್ಮ ಕೈ ಸೇರಲಿದ್ದು, ಇದು ಕಾಂಗ್ರೆಸ್ ಗ್ಯಾರೆಂಟಿಯಾಗಿದ್ದು ಯೋಚಿಸಿ ಮತ ಚಲಾವಣೆ ನಡೆಸಿ ಹಾಗೂ ಉಜ್ವಲ ಭವಿಷ್ಯವನ್ನು ಪಡೆಯಿರಿ ಎಂದು ಡಿಕೆಶಿ ತಿಳಿಸಿದರು.

5 ಉಚಿತ ಯೋಜನೆಗಳ ಮೂಲಕ ಮತ ಯಾಚಿಸಿದ ಡಿಕೆಶಿ..

- Advertisement -

Latest Posts

Don't Miss