Wednesday, March 12, 2025

Latest Posts

Mekedatu ಪಾದಯಾತ್ರೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ..!

- Advertisement -

ಕೆಪಿಸಿಸಿಯ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ (Ramalingareddy KPCC Chairman) ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕೊರೋನಾ (corona) ಕಡಿಮೆಯಾಗುತ್ತಿದ್ದಂತೆಯೇ ಮೇಕೆದಾಟು ಪಾದಯಾತ್ರೆ (Mekedatu hiking) ಯನ್ನು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಎಲ್ಲಿ ಪಾದಯಾತ್ರೆಯನ್ನು ನಿಲ್ಲಿಸಿದ್ದೆವೆ, ಅಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರೆ. ಕೊರೋನಾ ಕಡಿಮೆಯಾಗದೆ ಪಾದಯಾತ್ರೆಗೆ ಅನುಮತಿ ಕೊಡುವುದಿಲ್ಲ, ಹಾಗಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಕರೋನಾ ಕಡಿಮೆಯಾಗುತ್ತಿದ್ದಂತೆಯೇ ಪಾದಯಾತ್ರೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ರಸ್ತೆ ಗುಂಡಿಗಳ ಬಗ್ಗೆ ಮಾತನಾಡಿದ ಅವರು,  ಬೆಂಗಳೂರಿನ 198 ವಾರ್ಡ್ ಗಳಲ್ಲೂ ರಸ್ತೆ ಗುಂಡಿಗಳಿವೆ, ಇಷ್ಟರೊಳಗೆ ರಸ್ತೆಗೆ ಡಾಂಬರನ್ನೇ ಹಾಕಬಹುದಿತ್ತು. ಆದರೆ ಇಲ್ಲಿಯವರೆಗೆ ಗುಂಡಿ ಮುಚ್ಚಿಲ್ಲ, ಡಾಂಬರ್ ಹಾಕಿಲ್ಲ. ಕಳೆದ ಎರಡು ವರ್ಷದಿಂದ ರಾಜ್ಯ ಸರ್ಕಾರ ಬಿಬಿಎಂಪಿಗೆ (BBMP) ಹಣವನ್ನೇ ಕೊಟ್ಟಿಲ್ಲ. ಹಾಗಾಗಿ ಪಾಲಿಕೆಯಿಂದಲೂ ಗುಂಡಿ ಮುಚ್ಚೋ ಕೆಲಸ ಆಗುತ್ತಿಲ್ಲ. ಈಗ ನಡೆಯುತ್ತಿರುವ ಎಲ್ಲ ಕೆಲಸ ನಮ್ಮದು, ನಮ್ಮ ಸರ್ಕಾರದಲ್ಲಿ ಜಾರಿ ಮಾಡಿದ್ದ. ಟೆಂಡರ್ ,ಕಾಮಗಾರಿ ಎಲ್ಲವೂ ನಮ್ಮ ಅವಧಿಯಲ್ಲಿ ಮಾಡಿದ್ದು, ಹೇಳಿಕೊಳ್ಳುವುದು ಮಾತ್ರ ತಮ್ಮದೆಂದು. ಅಲ್ಲದೇ, ವಿದ್ಯುತ್ ದರ ಏರಿಕೆ ಜೊತೆ ಕಸ ಸಂಗ್ರಹಣೆಗೆ ತೆರಿಗೆ ಹಾಕುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ, ಇವರು ಬಂದಿರೋದೇ ಜನರ ತಲೆ ಮೇಲೆ ತೆರಿಗೆ ಹಾಕೋಕೆ. ಚುನಾವಣೆ ಮುಗಿಯುತ್ತಲೇ ಈ ತೆರಿಗೆ ಹಾಕುತ್ತಾರೆ. 2010ರಲ್ಲಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬಂದು 8 ಸಾವಿರ ಕೋಟಿ ರೂ. ಸಾಲ ಮಾಡಿ ಹೋಗಿದ್ದರು, ನಾವು ಅಧಿಕಾರಕ್ಕೆ ಬಂದಮೇಲೆ 2018ರಲ್ಲಿ ಸಾಲ ತೀರಿಸಿದ್ದೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಬೆಂಗಳೂರು ಅಭಿವೃದ್ಧಿಗೆ ಪ್ರಸ್ತುತ 1.5 ಸವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು.  ಆದರೆ ಇನ್ನು ಆ ಹಣ ಬಿಡುಗಡೆಯಾಗಿಲ್ಲ. ಪ್ರಚಾರಕ್ಕೆ ಮಾತ್ರ ನವ ಬೆಂಗಳೂರು ಅಂತಾರೆ. ಮೂರು ವರ್ಷ 6 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಇದು ಬಿಡುಗಡೆಯಾಗೋದು ಯಾವಾಗ? ಎಂದು ರಾಮಲಿಂಗರೆಡ್ಡಿ ಪ್ರಶ್ನಿಸಿದ್ದಾರೆ. ಇನ್ನು ಸರ್ಕಾರದ ಈ ನಡೆಯ ವಿರುದ್ಧ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇದನ್ನು ವಿರೋಧಿಸಿ ಬರುವ ಶನಿವಾರ ಧರಣಿ ಮಾಡುತ್ತೇವೆ ಎಂದಿದ್ದಾರೆ.

- Advertisement -

Latest Posts

Don't Miss