Wednesday, March 26, 2025

Latest Posts

ಕೆಪಿಎಸ್‌ಸಿ ಅಕ್ರಮ, ನೀವೆಷ್ಟು ಕೇಸ್‌ ತನಿಖೆ ನಡೆಸಿದ್ದೀರಿ ಮಾಹಿತಿ ಕೊಡಿ..? : ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

- Advertisement -

Political News: ರಾಜ್ಯದ ಕೆಪಿಎಸ್‌ಸಿಗೆ ಸಂಬಂಧಿಸಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆಯನ್ನು ಸಿಬಿಐಗೆ ವಹಿಸುವ ಹೈಕೋರ್ಟ್‌ ಇಚ್ಚೆಗೆ ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಕಳೆದ ಐದು ವರ್ಷಗಳಲ್ಲಿ ಸಿಐಡಿಯು ಯಾವ್ಯಾವ ಪ್ರಕರಣಗಳಲ್ಲಿ ತನಿಖೆ ನಡೆಸಿದೆ. ಅವುಗಳಲ್ಲಿನ ಯಾವ ಕೇಸ್‌ನಲ್ಲಿ ನೈಜತೆ ಗೊತ್ತಾಗಿದೆ. ಅಲ್ಲದೆ ಎಷ್ಟು ಪ್ರಕರಣಗಳನ್ನು ಸಿಐಡಿಯು ತನಿಖೆ ನಡೆಸಿದೆ ಎಂಬ ವಿವರವುಳ್ಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಕೆಎಟಿ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿತ್ತು ಅರ್ಜಿ..

ಇನ್ನೂ ಕೆಪಿಎಸ್‌ಸಿಯಲ್ಲಿ ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದ ಕೇಸ್‌ನಲ್ಲಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಅಂದರೆ ಕೆಎಟಿ ನೀಡಿರುವ ಆದೇಶವನ್ನು ಪ್ರಶ್ನಿಸಿ, ಎಂಜಿನಿಯರ್‌ಗಳಾದ ವಿಶ್ವಾಸ್‌ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಹಾಗೂ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿದೆ.

ಅಲ್ಲದೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದಮಂಡಿಸಿದರು. ಇನ್ನೂ 10 ಜನ ಅರ್ಜಿದಾರರ ನೇಮಕಾತಿಯನ್ನು ಪರಿಗಣಿಸಬಾರದು ಎಂಬ ಬಗ್ಗೆ ಆಯೋಗವು ಕೈಗೊಂಡ ನಿರ್ಣಯವನ್ನು ತಿಳಿಸಲಾಗಿತ್ತು. ಇಷ್ಟಾದರೂ ಸಹ ಅವರಿಗೆ ನೇಮಕಾತಿಯ ಪತ್ರಗಳನ್ನು ನೀಡಿರುವುದರ ಬಗ್ಗೆಯೂ ನಮ್ಮ ಕಡೆಯಿಂದ ಸೂಕ್ತ ಸಮರ್ಥನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಓಎಂಆರ್‌ ತಿರುಚಿದ್ದು ಹೇಗೆ..?

ಅಂದಹಾಗೆ ಇದರಲ್ಲಿ ಸರ್ಕಾರ ತಪ್ಪು ಮಾಡಿದೆಯಾ..? ಅಥವಾ ಇಲ್ಲವಾ..? ಎನ್ನವುದರ ಬಗ್ಗೆ ನ್ಯಾಯಾಂಗವು ವೆರಿಫಿಕೇಶನ್‌ ಮಾಡಬಹುದು. ಅಲ್ಲದೆ ಓಎಂಆರ್‌ ಶೀಟುಗಳ ವಿಚಾರದಲ್ಲಿ ಅವುಗಳನ್ನು ಎಲ್ಲಿ ತಿರುಚಲಾಗಿದೆ.? ಕರ್ನಾಟಕ ಲೋಕಸೇವಾ ಆಯೋಗದ ಒಳಗಡೆಯೇ ಇದು ನಡೆದಿದೆಯಾ..? ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಅಲ್ಲದೆ ಸರ್ಕಾರದ ನಿರ್ಧಾರದಂತೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಗಿದೆ. ನೇಮಕಾತಿಗೆ ಹಿನ್ನಡೆಯಾಗುವ ಭೀತಿಯಿಂದ ಆದೇಶ ಪತ್ರ ನೀಡಲಾಗಿದೆ, ಒಂದು ವೇಳೆ ಈ ತನಿಖೆಯಲ್ಲಿ ತಪ್ಪಿತಸ್ಥರೆಂದು ತಿಳಿದರೆ ಅವರನ್ನು ಸೇವೆಯನ್ನು ಕೈ ಬಿಡಲಾಗುವುದು ಎಂದು ಶಶಿಕಿರಣ್‌ ಶೆಟ್ಟಿ ಸರ್ಮಥನೆ ಮಾಡಿದರು.

ಎಇಇ ನೇಮಕದಲ್ಲಿ ಅಕ್ರಮದ ವಾಸನೆ ಬಂದಿತ್ತು..

ಇನ್ನೂ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ಇಲಾಖೆಯಲ್ಲಿ ಕುಡಿಯುವ ನೀರು ಪೊರೈಕೆ ವಿಭಾಗದ ಎಇಇ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಈ ಅಕ್ರಮದಲ್ಲಿ ಭಾಗಿಯಾಗಿ ನೇಮಕವಾದವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕೆಂದು ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಕೆಎಟಿ ಮನ್ನಿಸರಿಲಿಲ್ಲ. ಆದರೆ ಈ ಕೆಎಟಿ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇದಾಗಿದೆ.

- Advertisement -

Latest Posts

Don't Miss