Friday, October 18, 2024

Latest Posts

ಕೆ.ಆರ್.ಎಸ್. ಪಕ್ಷದಿಂದ “ಬೆಂಗಳೂರು ಪುನಶ್ಚೇತನಾ ಯಾತ್ರೆ”

- Advertisement -

 

 

ಕರ್ನಾಟಕದಲ್ಲಿ ಬೇರೂರಿರುವ ಭ್ರಷ್ಟ ಮತ್ತು ಅನೈತಿಕ ರಾಜಕಾರಣಕ್ಕೆ ಒಂದು ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಪರ್ಯಾಯವಾಗಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ. ಅದರ ಭಾಗವಾಗಿ ಕರ್ನಾಟಕದಾದ್ಯಂತ ಜನತೆಗೆ ಸ್ವಚ್ಚ, ಪ್ರಾಮಾಣಿಕ ರಾಜಕಾರಣದ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ, 2021ರಲ್ಲಿ “ಭ್ರಷ್ಟರೆ ಪವಿತ್ರ ರಾಜಕಾರಣ ಬಿಟ್ಟು ತೊಲಗಿ, ನಾಡ ಪ್ರೇಮಿಗಳೆ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ” ಬೈಕ್ ಯಾತ್ರೆಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿತ್ತು, ಮತ್ತು ಇದೇ ತಿಂಗಳ “ಕರ್ನಾಟಕ ಜನಚೈತನ್ಯ ಯಾತ್ರೆ”ಯ ಮೊದಲ ಹಂತ ಮುಕ್ತಾಯವಾಗಿದೆ. ಹೀಗೆ ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುವ ಮತ್ತು ಭ್ರಷ್ಚಾಚಾರ, ಅಕ್ರಮ ಮತ್ತು ದುರಾಡಳಿತದ ವಿರುದ್ಧ ಹೋರಾಟ ನಡೆಸುತ್ತಿದೆ.

ಅದೇ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಅಧ್ವಾನಗೊಂಡಿರುವ ಮೂಲಭೂತ ಸೌಕರ್ಯಗಳು, ದುರಾಡಳಿತ, ಭ್ರಷ್ಟಾಚಾರ ಇತ್ಯಾದಿಗಳನ್ನು ಬೆಂಗಳೂರಿಗರ ಗಮನಕ್ಕೆ ತಂದು ಅವರಿಗೆ “ಮಾದರಿ ಬೆಂಗಳೂರಿಗಾಗಿ” ಕೆ.ಆರ್.ಎಸ್, ಪಕ್ಷದ ಪ್ರಣಾಳಿಕೆಯನ್ನು ತಿಳಿಸಿ ಮತ್ತು ಈಗಾಗಲೇ ಘೋಷಣೆಯಾಗಿರುವ ಕೆ.ಆರ್.ಎಸ್. ಪಕ್ಷದ ಪ್ರಾಮಾಣಿಕ ಸಂಭಾವ್ಯ ಬಿಬಿಎಂಪಿ ವಾರ್ಡ್ ಅಭ್ಯರ್ಥಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಜೂನ್ 1, 2022 ರಿಂದ ನಗರದ ಪುರಭವನದ ಮುಂಭಾಗದಿಂದ ಆರಂಭವಾಗಿ ಒಂದು ತಿಂಗಳ ಕಾಲ ನಿರಂತರವಾಗಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತಗಳು ಮತ್ತು ವಾರ್ಡ್‍ಗಳಲ್ಲಿ “ಬೆಂಗಳೂರು ಪುನಶ್ಚೇತನಾ ಯಾತ್ರೆ”ಯನ್ನು ಹಮ್ಮಿಕೊಳ್ಳಲಾಗಿದೆ, ಈ ಬೃಹತ್ ಅಭಿಯಾನದಲ್ಲಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತ್ತು ವಾರ್ಡ್ ಗಳ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಲಂಚಮುಕ್ತ ಅಭಿಯಾನ, ತಿಂಗಳುಗಳಿಂದ ಬಗೆಹರಿಯದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವುದು, ಪಕ್ಷ ಸೇರ್ಪಡೆ ಕಾರ್ಯಕ್ರಮಗಳು, ಪಕ್ಷದ ಸ್ಥಳೀಯ ಕಛೇರಿಗಳ ಉದ್ಘಾಟನೆಗಳು, ಇತ್ಯಾದಿ ಕಾರ್ಯಕ್ರಮಳನ್ನು ನಡೆಸುತ್ತಾ ಪಕ್ಷದ ಪ್ರಚಾರ ಹಾಗೂ ಸಂಘಟನೆ ಮಾಡಾಲಾಗುವುದು. ಕೆ.ಆರ್.ಎಸ್. ಪಕ್ಷದಿಂದ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಆಕಾಂಕ್ಷಿಗಳು 9611720802 ಮೊಬೈಲ್ ಸಂಖ್ಯೆಗೆ ’BBMP” ಎಂದು ವಾಟ್ಸಾಪ್ ಮಾಡಿ ನೊಂದಾಯಿಸಬಹುದು.

ಜೆಸಿಬಿ ಪಕ್ಷಗಳ ನಿರಂತರ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೆಂಗಳೂರಿನಲ್ಲಿ ಜನರ ಪರಿಸ್ಥಿತಿ ಆಯೋಮಯವಾಗಿದ್ದು, ಇದಕ್ಕೆ ಪರಿಹಾರವೆಂದರೆ ಸ್ವಚ್ಚ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದಿಂದ ಮಾತ್ರ ಸಾಧ್ಯ, ಇದನ್ನು ಸಾಧ್ಯವಾಗಿಸುವುದು ಕೇವಲ ಕೆ. ಆರ್. ಎಸ್. ಪಕ್ಷದಿಂದ ಮಾತ್ರ ಸಾಧ್ಯ. ಇಡೀ ದೇಶಕ್ಕೆ ಮಾದರಿ ನಗರವನ್ನಾಗಿ “ಸ್ವಚ್ಚ, ಸುಂದರ, ಸಮೃದ್ಧ, ಸದೃಢ” ಹೆಮ್ಮೆಯ ಬೆಂಗಳೂರನ್ನು ನಿರ್ಮಾಣ ಮಾಡಲು ಕೆ. ಆರ್. ಎಸ್. ಪಕ್ಷ ಹಲವಾರು ಯೋಜನೆಗಳನ್ನು ಹೊಂದಿದ್ದು, ಅದನ್ನು ಈ ಯಾತ್ರೆಯ ಸಮಯದಲ್ಲಿ ಜನರ ಮುಂದಿಟ್ಟು ಜನರ ಸಲಹೆ ಸೂಚನೆಗಳನ್ನು ಪಡೆಯಲಾಗುವುದು.

ಬೆಂಗಳೂರು ಪುನಶ್ಚೇತನಾ ಯಾತ್ರೆಯ ಕಾರ್ಯಕ್ರಮ ಪಟ್ಟಿ ಕೆಳಗಿನಂತಿದೆ
ಜೂನ್ 1 – ಚಿಕ್ಕಪೇಟೆ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ
ಜೂನ್ 2 – ಬಸವನಗುಡಿ ವಿಧಾನಸಭಾ ಕ್ಷೇತ್ರ
ಜೂನ್ 3 – ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ
ಜೂನ್ 4 – ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಜೂನ್ 5 – ವಿಶ್ವ ಪರಿಸರ ದಿನಾಚರಣೆ
ಜೂನ್ 6 – ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ
ಜೂನ್ 7 – BTM ಲೇಔಟ್ ವಿಧಾನಸಭಾ ಕ್ಷೇತ್ರ
ಜೂನ್ 8 – ಯಲಹಂಕ ವಿಧಾನಸಭಾ ಕ್ಷೇತ್ರ
ಜೂನ್ 9 – ಬ್ಯಾಟರಾಯನಪುರ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳು
ಜೂನ್ 10 – ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ
ಜೂನ್ 11 – ಯಶವಂತಪುರ ವಿಧಾನಸಭಾ ಕ್ಷೇತ್ರ
ಜೂನ್ 13 – ಮಹದೇವಪುರ ವಿಧಾನಸಭಾ ಕ್ಷೇತ್ರ
ಜೂನ್ 14 – ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ
ಜೂನ್ 15 – ರಾಜಾಜಿನಗರ ವಿಧಾನಸಭಾ ಕ್ಷೇತ್ರ
ಜೂನ್ 16 – ಗಾಂಧಿನಗರ ಮತ್ತು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳು
ಜೂನ್ 17 – ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
ಜೂನ್ 18 – ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಜೂನ್ 20 – ಶಾಂತಿನಗರ ವಿಧಾನಸಭಾ ಕ್ಷೇತ್ರ
ಜೂನ್ 21- ಶಿವಾಜಿನಗರ ವಿಧಾನಸಭಾ ಕ್ಷೇತ್ರ
ಜೂನ್ 22 – ವಿಜಯನಗರ ವಿಧಾನಸಭಾ ಕ್ಷೇತ್ರ
ಜೂನ್ 23 – ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ
ಜೂನ್ 24 – ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಜೂನ್ 27 – ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ
ಜೂನ್ 28 – ಜಯನಗರ ವಿಧಾನಸಭಾ ಕ್ಷೇತ್ರ

————-

 

- Advertisement -

Latest Posts

Don't Miss