ಬೇಸಿಗೆ ಗಾಲ ಶುರುವಾಗಿದೆ. ಈ ಬೇಸಿಗೆಗೆ ಜನ ದಾಹ ತಣಿಸೋಕ್ಕೆ ಜ್ಯೂಸ್, ಮಿಲ್ಕ್ ಶೇಕ್, ಎಳನೀರಿನ ಮೊರೆ ಹೋಗ್ತಾರೆ. ಇನ್ನು ಬೇಸಿಗೆ ಅಂದ್ರೆನೇ ಐಸ್‌ಕ್ರೀಮ್ ಸೀಸನ್. ಆದ್ರೆ ಈ ಕೊರೊನಾ ಟೈಮ್‌ನಲ್ಲಿ ಹೊರಗಡೆ ಐಸ್‌ಕ್ರೀಮ್ ತಿನ್ನೋಕ್ಕೆ ಭಯ. ಹಾಗಾಗಿ ನಾವು ನಿಮಗಾಗಿ ಕುಲ್ಫಿ ರೆಸಿಪಿಯನ್ನ ತಂದಿದ್ದೇವೆ. ಈ ಕುಲ್ಫಿ ಮಾಡೋಕ್ಕೆ ಬೇಕಾದ ಸಾಮಗ್ರಿ, ಮತ್ತು ಇದನ್ನ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ ಬನ್ನಿ..
500 ML ಹಾಲು, ಚಿಟಿಕೆ ಕೇಸರಿ ದಳ, ಅರ್ಧ ಕಪ್ ಸಕ್ಕರೆ, ಎರಟು ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, ಎರಡರಿಂದ ಮೂರು ಸ್ಪೂನ್ ವೆನಿಲ್ಲಾ ಎಸ್ಸೆನ್ಸ್, ಇದನ್ನ ಅಗತ್ಯವಿದ್ದರೆ ಬಳಸಿ, ಇಲ್ಲವಾದಲ್ಲಿ ಬೇಡಾ. ಒಂದು ಕಪ್ ಹಾಲಿನ ಕೆನೆ, ಇವಿಷ್ಟು ಕುಲ್ಫಿ ತಯಾರಿಸಲು ಬೇಕಾಗುವ ಸಾಮಗ್ರಿ.
ಮೊದಲನೇಯದಾಗಿ ಹಾಲು ಬಿಸಿ ಮಾಡಲು ಇಟ್ಟು, ಅದಕ್ಕೆ ಕೇಸರಿ ದಳ, ಸಕ್ಕರೆ ಹಾಕಿ ಮಿಕ್ಸ್ ಮಾಡಿ, ಎರಡು ಸಲ ಕುದಿ ಬರುವವರೆಗೂ ಬಿಸಿ ಮಾಡಿ. ಅದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ. ನಂತರ ಒಂದು ಚಿಕ್ಕ ಬೌಲ್‌ಗೆ ಕಾರ್ನ್‌ಫ್ಲೋರ್ ಮತ್ತು ಒಂದು ಕಪ್ ಹಾಲು ಮಿಕ್ಸ್ ಮಾಡಿ, ಆ ಪೇಸ್ಟ್‌ನ್ನ ಕುದಿಯುತ್ತಿರುವ ಹಾಲಿಗೆ ಹಾಕಿ, ಕೊಂಚ ಥಿಕ್ ಆಗುವವರೆಗೂ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ.
ಈಗ ಒಂದು ಬಾಕ್ಸ್‌ಗೆ ಈ ಮಿಶ್ರಣವನ್ನ ಸೇರಿಸಿ, 3ರಿಂದ 4 ಗಂಟೆ ಫ್ರೀಜರ್‌ನಲ್ಲಿರಿಸಿ. 4 ಗಂಟೆ ಬಳಿಕ ಅದು ಕ್ಯಾಂಡಿ ರೀತಿ ಸೆಟ್ ಆಗಿರುತ್ತದೆ. ಹಾಗೆ ಸೆಟ್ ಆದ ಕುಲ್ಫಿಯನ್ನ ಮತ್ತೆ ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ಜೊತೆಗೆ ಹಾಲಿನ ಕೆನೆ ಹಾಕಿ, ಕ್ರೀಮಿ ಟೆಕ್ಸಚರ್ ಬರುವವರೆಗೆ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಆ ಬಾಕ್ಸ್‌ಗೆ ಹಾಕಿ ಮತ್ತೆ 5ರಿಂದ 6 ಗಂಟೆ ಫ್ರಿಜರ್‌ನಲ್ಲಿರಿಸಿ. ನಂತರ ಅದನ್ನ ಪ್ಲೇಟ್‌್ಗೆ ಹಾಕಿ. ಡ್ರೈಫ್ರೂಟ್ಸ್, ಚೆರ್ರಿ ಹಾಕಿ, ಗಾರ್ನಿಶ್ ಮಾಡಿ. ಸವಿಯಲು ಕೊಡಿ.