Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ನಿನ್ನೆ ಕೇಂದ್ರ ಸಚಿವ ಕುಮಾರಸ್ವಾಮಿಯವರು, ರಾಜ್ಯ ಸಚಿವರಾಗಿರುವ ಕೃಷ್ಣಭೈರೇಗೌಡರು, ಸರ್ಕಾರಿ ನೌಕರರಿಗೆ ರೇಟ್ ಅಂದ್ರೆ ಲಂಚ ಕೇಳುವ ಬಗ್ಗೆ ಮಾತನಾಡಿದ್ದಾರೆಂದು ಹಂಗಿಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಸುರೇಶ್, ಕುಮಾರಸ್ವಾಮಿಯವರು ಸ್ವತಃ ಸಿಎಂ ಆಗಿದ್ದಾಗ, ಅವರೇ ರೇಟ್ ಕಾರ್ಡ್ ಇಡುತ್ತಿದ್ದರು. ಇನ್ನು ಅವರೇನು ಹೇಳೋದು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ನೀವು ಬಿಎಸ್‌ವೈ, ವಿಜಯೇಂದ್ರ ಅವರ ಆಡಳಿತದ ಸರ್ಕಾರವನ್ನು ನೋಡಿದ್ದೀರಿ. ನಾನು ಈ ಬಗ್ಗೆ ಏನೂ ಮಾತನಾಡೋದಿಲ್ಲ. ನಮ್ಮ ಸರ್ಕಾರ, ಎಲ್ಲದಕ್ಕೂ ಕಡಿವಾಣ ಹಾಕಿ, ಹಂತ ಹಂತವಾಗಿ ಸರಿಪಡಸು ಪ್ರಯತ್ನಿಸುತ್ತಿದೆ. ಅದು ಕೆಲವರಿಗೆ ಇಷ್ಟವಿಲ್ಲ. ಹಾಗಾಗಿ ಜೆಡಿಎಸ್, ಬಿಜೆಪಿಗರು ಆರೋಪಿಸುತ್ತಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.
ಅಲ್ಲದೇ ಕುಮಾರಸ್ವಾಮಿಯವರು ಚುನಾವಣಾ ಸಮಯದಲ್ಲಿ ನೀರಾವರಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದಿದ್ದರು. ಈ ಮಂತ್ರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಪ್ರೆಶರ್ ಹಾಕಿ, ಕೆಲಸ ಮಾಡಿಸಲಿ. ರಾಜ್ಯದ ಪರವಾಗಿ, ಕೇಂದ್ರ ಸಚಿವರು ಧ್ವನಿ ಎತ್ತಲಿ ಎಂದು ಸುರೇಶ್ ಸವಾಲ್ ಹಾಕಿದ್ದಾರೆ.
ನನ್ನನ್ನು ಯಾರು ಬಂದು ಕೇಳಲ್ಲವೆಂದು ಹೇಳುತ್ತಾರೆ. ಕೇಳದೇ, ರಾಜ್ಯದ ಅಭಿವೃದ್ಧಿ ಮಾಡೋದು, ಕೇಂದ್ರ ಮಂತ್ರಿಗಳ ಜವಾಬ್ದಾರಿ. ಅವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಬಳಿ ಎಲ್ಲವನ್ನೂ ಹೇಳಿದ ಬಳಿಕವೇ ಅವರು ಕ್ರಮ ತೆಗೆದುಕ“ಳ್ಳಬೇಕು ಎಂದಿಲ್ಲ. ಅವರೇ ಆ ಜವಾಬ್ದಾರಿ ನಿರ್ವಹಿಸಬೇಕು. ನಾನು ಈ ಬಗ್ಗೆ ಹೆಚ್ಚು ಹೇಳಲು ಹೋಗೋದಿಲ್ಲ. ಅವರಿಗೆ ಕೇಂದ್ರದಲ್ಲಿ ಕೆಲಸ ಕಡಿಮೆ ಅನ್ನಿಸುತ್ತದೆ. ಅದಕ್ಕೆ ಅವರು ಬೆಂಗಳೂರಿನಲ್ಲಿಯೇ ಇರುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕುಮಾರಸ್ವಾಮಿಯವರ ಬಗ್ಗೆ ವ್ಯಂಗ್ಯವಾಡಿದ್ದಾರೆ.