Saturday, July 12, 2025

Latest Posts

Recipe: ಮಸಾಲಾ ವಡೆ ರೆಸಿಪಿ

- Advertisement -

Recipe: ಮಳೆಗಾಲದಲ್ಲಿ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸಿದರೆ, ನೀವು ಈ ಈಸಿ ರೆಸಿಪಿಯನ್ನು ಮಾಡಿ ತಿನ್ನಬಹುದು.

ಬೇಕಾಗುವ ಸಾಮಗ್ರಿ: 1 ಕಪ್ ಕಡಲೆಬೇಳೆ, 2 ಈರುಳ್ಳಿ, ಕೊತ್ತೊಂಬರಿ ಸ“ಪ್ಪು, ಸಬ್ಬಸಿಗೆ ಸ“ಪ್ಪು, 4 ಹಸಿಮೆಣಸು, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಚಕ್ಕೆ, ಲವಂಗ, ಶುಂಠಿ, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: 4 ತಾಸು ಕಡಲೆಬೇಳೆಯನ್ನು ನೆನೆಸಿ, ಚೆನ್ನಾಗಿ ಸ್ವಚ್ಛ ಮಾಡಿ. ಬಳಿಕ ಮಿಕ್ಸಿ ಜಾರ್‌ಗೆ ಸ್ವಲ್ಪ ನೆನೆಸಿದ ಕಡಲೆಬೇಳೆ, ಹಸಿಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗ, ಶುಂಠಿ ಹಾಕಿ ರುಬ್ಬಿ. ಬಳಿಕ ಮಿಕ್ಸಿಂಗ್‌ ಬೌಲ್‌ಗೆ ಈ ಮಿಶ್ರಣ, ಉಳಿದ ಕಡಲೆಬೇಳೆ, ಈರುಳ್ಳಿ, ಕೊತ್ತೊಂಬರಿ ಸ“ಪ್ಪು, ಸಬ್ಬಸಿಗೆ ಸ“ಪ್ಪು, ಉಪ್ಪು ಹಾಕಿ ಮಿಕ್ಸ್ ಮಾಡಿ.

ಈಗ ಈ ಮಿಶ್ರಣದಿಂದ ವಡೆ ತಯಾರಿಸಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಮಸಾಲಾ ವಡೆ ರೆಡಿ. ಸಂಜೆ ಚಹಾ ಕುಡಿಯುವ ವೇಳೆ, ನೀವು ಇದನ್ನು ಮಾಡಿ ತಿನ್ನಬಹುದು.

- Advertisement -

Latest Posts

Don't Miss