Monday, December 23, 2024

Latest Posts

‘ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ..?’

- Advertisement -

ಹಾಸನ : ಫೆ.4 ರಂದು ಹಾಸನ ಜಿಲ್ಲೆಯ ಏಳು ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಾಗೂ ಆ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಎಚ್.ಡಿ.ರೇವಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಾಸನದ ಅರಸಿಕೆರೆಯಲ್ಲಿ ಮಾತನಾಡಿದ ಕುಮಾರಸ್ವಾಮಿ,

ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ..? ಫೆ.3 ನೇ ತಾರೀಖಿನ ನಂತರ ಚರ್ಚೆ ಮಾಡ್ತಿವಿ ಅಂತ ಹೇಳಿದ್ದೀನಿ. ಇವತ್ತು ತಿಪಟೂರು, ಭದ್ರಾವತಿಯಲ್ಲಿ ಕಾರ್ಯಕ್ರಮ ಇದೆ. ಇಲ್ಲಿ ಯಾವ ಗೊಂದಲವಿಲ್ಲ, ಯಾವುದೇ ಗೊಂದಲ ಇದ್ರು ಸರಿಪಡಿಸುವ ಶಕ್ತಿ ಇದೆ. ನೀವು ಇಷ್ಟೊಂದು ಗಾಬರಿಯಾಗಬೇಡಿ. ಇದನ್ನೆಲ್ಲ ಅರಗಿಸಿಕೊಳ್ಳುವ ಶಕ್ತಿ ಇದೆ ಎಂದಿದ್ದಾರೆ.

ಕಾಸಿನಸರ ಚಿತ್ರದ ಹಾಡು ಬಿಡುಗಡೆ

ಅಲ್ಲದೇ, ಅರಗಿಸಿಕೊಳ್ಳುವ ಶಕ್ತಿ ಇಲ್ದೆ ಇದ್ರೆ, ನಾನು ಈ ರಾಜ್ಯದಲ್ಲಿ ಒಬ್ಬೊಂಟಿಯಾಗಿ ಹೋರಾಟ ಮಾಡಲು ಆಗೋದಾ..? ಆ ತರಾ ಇಲ್ಲಾ, ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡ್ತಿವಿ. ರಾಜ್ಯದ ಜನತೆಯ ಭಾವನೆಗಳು, ಪಕ್ಷದ ಕಾರ್ಯಕರ್ತರ ಭಾವೆನಗಳು, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅದರ ಮೇಲೆ ತೀರ್ಮಾನ ಮಾಡ್ತಿನಿ. ಸದ್ಯದಲ್ಲೇ ಸಭೆ ಕರೀತಿನಿ, ಸದ್ಯದಲ್ಲೇ ಎರಡನೇ ಪಟ್ಟಿ ರಿಲೀಸ್ ಮಾಡ್ತಿವಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪಂಚರತ್ನ ಯಾತ್ರೆ ಪಂಚರ್ ಆಗುತ್ತೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ,  ಅವರ ಪಂಚರ್ ರಿಪೇರಿ ಮಾಡಿಕೊಳ್ಳಲು ಹೇಳಿ, ನನ್ನ ಪಂಚರ್ ಆಮೇಲೆ ನೋಡೋಣ. ಅವರು ಪಂಚರ್ ಆಗಿ ಕುಳಿತವರಲ್ಲಾ ಅದನ್ನು ರಿಪೇರಿ ಮಾಡಿಕೊಳ್ಳಲು ಹೇಳಿ. ನಳಿನ್ ಕುಮಾರ್ ಕಟೀಲ್ ಬಗ್ಗೆ ಚರ್ಚೆ ಯಾಕೆ ಮಾಡ್ತೀರಿ..? ನಳಿನ್ ಕುಮಾರ್ ಕಟೀಲ್ ಒಬ್ಬ ವಿದೂಷಕ ಇದ್ದ ಹಾಗೆ. ನಳಿನ್ ಕುಮಾರ್ ಬಗ್ಗೆ ಬಿಚ್ಚಿಬಿಟ್ರೆ ದೇಶ ಬಿಟ್ಟು ಹೋಗಬೇಕಾಗುತ್ತದೆ. ಒಂದು ಸಲ ಬಾಂಬೆಗೆ ಓಡಿ ಹೋಗಿದ್ರು. ಬಾಂಬೆಗೆ ಯಾಕ್ ಓಡಿ ಹೋಗಿದ್ರು ಅಂತ ಕೇಳಿ. ಯಾರನ್ನೋ ಪಂಚರ್ ಮಾಡಿ ಬಾಂಬೆಗೆ ಓಡಿ ಹೋಗಿದ್ರು..? ಅದೆನ್ನೆಲ್ಲಾ ಬಿಚ್ಚಿಬಿಟ್ರೆ ಕರ್ನಾಟಕ ಬಿಟ್ಟು ಓಡಿ ಹೋಗಬೇಕಾಗುತ್ತದೆ. ಅವರ ಸಂಸ್ಕೃತಿನೇ ಅದು ಎಂದು ಕುಮಾರಸ್ವಾಮಿ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಮಾನದಲ್ಲಿ ಬೆಂಕಿ ಅವಘಡ, ಪ್ರಯಾಣಿಕರು ಸೇಫ್

ಅಲ್ಲದೇ, ರಮೇಶ್ ಜಾರಕಿಹೋಳಿ ಹಾಗೂ ಡಿಕೆಶಿ ನಡುವೆ ಸಿಡಿ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನನಗೂ ಅದಕ್ಕೂ ಸಂಬಂಧವಿಲ್ಲ. ಅದು ಕಾಂಗ್ರೆಸ್ ಬಿಜೆಪಿಗೆ ಸಂಬಂಧಿಸಿದ್ದು ಅವರನ್ನು ಕೇಳಿ ಎಂದಿದ್ದಾರೆ.

- Advertisement -

Latest Posts

Don't Miss