Tuesday, May 28, 2024

Latest Posts

ಕುಮಾರಸ್ವಾಮಿ ಅವರ ಹೇಳಿಕೆ NDA ಪಕ್ಷಕ್ಕೆ ಮಹಿಳೆಯರ ಮೇಲೆ ಇರುವ ಕೀಳು ಮನಸ್ಥಿತಿಗೆ ಉದಾಹರಣೆ: ಡಿಕೆಶಿ

- Advertisement -

Political News: ಮಾಜಿ ಸಿಎಂ ಕುಮಾರಸ್ವಾಮಿ ಮಾತಿನ ಭರದಲ್ಲಿ ಕಾಂಗ್ರೆಸ್ ಕೊಡುವ ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆಂದು ಹೇಳಿದ್ದು, ಈ ಮಾತಿಗೆ ಹಲವ ಕಾಂಗ್ರೆಸ್ ನಾಯಕರು ಆಕ್ರೋಶ ಹಾರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರ ಹೇಳಿಕೆಯು ಎನ್‌ಡಿಎ ಪಕ್ಷಕ್ಕೆ ಮಹಿಳೆಯರ ಮೇಲೆ ಇರುವ ಕೀಳು ಮನಸ್ಥಿತಿಗೆ ಮತ್ತೊಂದು ಉದಾಹರಣೆ. ಗೃಹಲಕ್ಷ್ಮಿ ಗ್ಯಾರಂಟಿಯ ಹಣವನ್ನು ಕೂಡಿಟ್ಟು ರಾಜ್ಯದ ಹೆಣ್ಣುಮಕ್ಕಳು ಹೇಗೆ ಸ್ವಾವಲಂಬನೆ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ, ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ದಿನನಿತ್ಯ ವರದಿಗಳಾಗುತ್ತಿವೆ. ಇಂತಹ ಕ್ರಾಂತಿಕಾರಿ ಯೋಜನೆಗಳನ್ನು ಬಿಜೆಪಿಯಾಗಲೀ ನಿಮ್ಮ ಪಕ್ಷದವರಾಗಲೀ ಕನಸಿನಲ್ಲೂ ಯೋಚಿಸಲು ಸಾಧ್ಯವಿಲ್ಲ. ಜಾತ್ಯತೀತ ಸಿದ್ಧಾಂತಗಳನ್ನು ಬದಿಗೊತ್ತಿ ಬಿಜೆಪಿ ಜೊತೆ ಸೇರಿ ದಾರಿ ತಪ್ಪಿರುವುದು ನೀವು. ಕೋಟ್ಯಂತರ ಕನ್ನಡತಿಯರ ಭಾವನೆಗಳನ್ನು ಕೆಣಕಿದ್ದೀರ, ಬರೆದಿಟ್ಟುಕೊಳ್ಳಿ ಈ ಲೋಕಸಭಾ ಚುನಾವಣೆಯಲ್ಲಿ ಅವರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ. ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿ: ಬಸವರಾಜ ಬೊಮ್ಮಾಯಿ

ವಿಕಸಿತ ಭಾರತ ಸಂಕಲ್ಪದ‌ ಮಾರ್ಗದರ್ಶಿ ಪ್ರಣಾಳಿಕೆಯಾಗಿದೆ: ಬಿಜೆಪಿ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಜೋಶಿ

- Advertisement -

Latest Posts

Don't Miss