ರಾಜಕೀಯ ಸುದ್ದಿ: ವಿಧಾನಸೌಧದಲ್ಲಿ ಕಳೆದ ಒಂದು ವಾರದಿಂದ ಅಧಿವೇಶನ ಶುರುವಾಗಿದ್ದು ಕುಮಾರ್ ಸ್ವಾಮಿಯವರು ಆಡಳಿತ ಪಕ್ಷವಾದ ಕಾಂಗ್ರೆಸ್ ಮೆಲೆ 30 ಲಕ್ಷ ಲಂಚ ತೆಗೆದುಕೊಂಡಿರುವ ಬಗ್ಗೆ ಆರೋಪ ಮಾಡಿ ನನಲ್ಲಿ ಲಂಚಕ್ಕೆ ಸಂಬಂಧ ಪಟ್ಟ ದಾಖಲಾತಿಗಳು ಅವರ ಹತ್ತಿರ ಇರುವುದಾಗಿ ಮಾಧ್ಯಮಗಳ ಮುಂದೆ ಪೆನ್ ಡ್ರೈವ್ ತೋರಿಸಿದ್ದಾರೆ.
ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳನ್ನು ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಲು ಲಕ್ಷನುಗಟ್ಟಲೆ ಲಂಚ ಪಡೆದುಕೊಂಡುರುವ ಬಗ್ಗೆ ಆಡಿಯೋ ದಾಖಲಾತಿಗಳು ತಮ್ಮಲ್ಲಿ ಇರುವುದಾಗಿಯೂ ಮತ್ತು ಆ ದಾಖಲೆಗಳನ್ನು ಇಂದು ಸಧನದ ಒಳಗಡೆ ಸಭಾಧ್ಯಕ್ಷರ ಮುಂದೆಯೇ ಬಿಡುಗೆಡೆ ಮಾಡುವುದಾಗಿಯೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ತಿಳಿಸಿದ್ದಾರೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ಕಲಾಪ ಆರಂಭವಾಗಲಿದ್ದು ಕುಮಾರಸ್ವಾಮಿಯವರು ಲಂಚದ ಆರೋಪಕ್ಕೆ ಸಂಬಂದ ಪಟ್ಟಂತಹ ದಾಖಲಾತಿಗಳನ್ನು ಸದನದ ಒಳಗಡೆ ಬಿಡುಗಡೆ ಮಾಡುತ್ತಾರ ಅಥವಾ ಹೊರಗಡೆ ಬಿಡುಗಡೆ ಮಾಡುತ್ತಾರಾ? ಎಂಬುವುದನ್ನು ಕಾದು ನೋಡಬೇಕಿದೆ.