Movie News: ತಮಿಳು ನಟ, ರಾಜಕಾರಣಿ ವಿಜಯಕಾಂತ್ ನಿಧನರಾಗಿದ್ದು, ಈ ಬಗ್ಗೆ ಲಹರಿ ಮ್ಯೂಸಿಕ್ ಮಾಲೀಕರಾದ ಲಹರಿ ವೇಲು ಸಂತಾಪ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಮೇರುನಟ ವಿಜಯ್ಕಾಂತ್ ಅವರು ಇಂದು ದಿವಂಗತರಾಗಿದ್ದಾರೆ. ಇಂದು ತುಂಬಾ ನೋವಿನ ಸಂಗತಿ. ಇವರ ಅಗಲಿಕೆ ಇಡೀ ಚಲನಚಿತ್ರ ರಂಗಕ್ಕೆ ನಷ್ಟ ಎನ್ನಬಹುದು. ಅವರ ಬಗ್ಗೆ ಹೇಳಬೇಕು ಅಂದ್ರೆ, ಅವರು ನನಗೆ ಸುಮಾರು ವರ್ಷಗಳಿಂದ ಪರಿಚಯ. ಅವರ ಮನೆಯಲ್ಲಿ 24 ತಾಸು ಒಲೆ ಉರಿಯುತ್ತೆ. ಯಾರೇ ಬರಲಿ, ಅವರಿಗೆ ಊಟ, ತಿಂಡಿ ವ್ಯವಸ್ಥೆ ಎಲ್ಲ ಮಾಡುತ್ತಿದ್ದರು. ಹಿರಿಯರು ಕಿರಿಯರು ಎಂಬ ಬೇಧ ಭಾವ ಇರಲಿಲ್ಲ.
ಅದು ಬಿಟ್ಟು ಎಷ್ಟೋ ಕಲಾವಿದರಿಗೆ, ನಿರ್ಮಾಪಕರಿಗೆ, ಹಂಚಿಕೆದಾರರಿಗೆ ತುಂಬಾ ಸಹಾಯ ಮಾಡಿದ್ದಾರೆ. ಅವರೊಬ್ಬ ರಾಜಕಾರಣಿ ಕೂಡ ಹೌದು. ರಾಜಕಾರಣದಲ್ಲೂ ಅವರು ಸಾಧನೆ ಮಾಡದವರು. ಸುಮಾರು 5 ವರ್ಷದಿಂದ ಅವರಿಗೆ ಥೈರಾಯ್ಡ್ ಸಮಸ್ಯೆ ಆಗಿತ್ತು. ಅವರಿಂದು ಇಲ್ಲ. ಅವರ ಆಥ್ಮಕ್ಕೆ ಶಾಂತಿ ಸಿಗಲಿ. ಭಗವಂತ ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಲಹರಿ ಹೇಳಿದ್ದಾರೆ.
ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ