Monday, December 23, 2024

Latest Posts

“ಲಕ ಲಕ ಲ್ಯಾಂಬೋರ್ಗಿನಿ” ಪೋಸ್ಟರ್ ​ಜಲಕ್..!

- Advertisement -

‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿನ ಪೋಸ್ಟರ್​ ಬಿಡುಗಡೆ ಆಗಿದೆ.ಸಂಗೀತ ನಿರ್ದೇಶಕ, ಗಾಯಕ ಚಂದನ್​ ಶೆಟ್ಟಿ ಅವರು ತಮ್ಮ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾ ಗೀತೆಗಳಿಗಿಂತಲೂ ತಮ್ಮ ಮ್ಯೂಸಿಕ್​ ವಿಡಿಯೋಗಳ ಮೂಲಕ ಅವರು ಹೆಚ್ಚು ಫೇಮಸ್​ ಆಗಿದ್ದಾರೆ. ಈಗ ಅವರು ಅದೇ ರೀತಿ ಇನ್ನೊಂದು ಹಾಡು ತಯಾರಿಸಿದ್ದಾರೆ. ಅದರಲ್ಲಿ ಖ್ಯಾತ ನಟಿ ರಚಿತಾ ರಾಮ್​ ಅವರು ಹೆಜ್ಜೆ ಹಾಕಿರುವುದು ವಿಶೇಷ. ಈ ಹಾಡಿಗೆ ‘ಲಕ ಲಕ ಲ್ಯಾಂಬೋರ್ಗಿನಿ’ ಎಂದು ಶೀರ್ಷಿಕೆ ಇಡಲಾಗಿದೆ. ಅನೇಕ ಸಿನಿಮಾಗಳಲ್ಲಿ ರಚಿತಾ ರಾಮ್​ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಈ ಮ್ಯೂಸಿಕ್​ ವಿಡಿಯೋಗಾಗಿ ಸಮಯ ಹೊಂದಿಸಿಕೊಂಡು ಡ್ಯಾನ್ಸ್​ ಮಾಡಿದ್ದಾರೆ.

ಈಗ ನ್ಯೂ ಇಯರ್​ ಸಮೀಪಿಸುತ್ತಿದೆ. ಎಲ್ಲರೂ ಪಾರ್ಟಿ ಮಾಡುವ ಮೂಡ್​ನಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ ಚಂದನ್​ ಶೆಟ್ಟಿ ‘ಲಕ ಲಕ ಲ್ಯಾಂಬೋರ್ಗಿನಿ’ ಬಗ್ಗೆ ಸುದ್ದಿ ನೀಡಿ ಕೌತುಕ ಮೂಡಿಸಿದ್ದಾರೆ. ಈ ಹಾಡಿನ ಬಗ್ಗೆ ತಿಳಿಸಲು ಅವರೊಂದು ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಚಿತಾ ರಾಮ್​ ಮತ್ತು ಚಂದನ್​ ಶೆಟ್ಟಿ ಸ್ಟೈಲಿಶ್​ ಆಗಿ ಪೋಸ್​ ನೀಡಿದ್ದಾರೆ. ಆರ್​. ಕೇಶವ್​ ಮತ್ತು ಬಿಂದ್ಯಾ ಕೆ. ಗೌಡ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಸಂಗೀತ, ಸಾಹಿತ್ಯ, ಗಾಯನ ಮತ್ತು ಕಾನ್ಸೆಪ್ಟ್​ ಚಂದನ್​ ಶೆಟ್ಟಿ ಅವರದ್ದು. ಸದ್ಯ ಪೋಸ್ಟರ್​ ನೋಡಿ ಅಭಿಮಾನಿಗಳ ಕ್ರೇಜ್​ ಹೆಚ್ಚಾಗಿದೆ. ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿಗೆ ಖ್ಯಾತ ನಿರ್ದೇಶಕ ನಂದ ಕಿಶೋರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ಪೊಗರು’ ಸಿನಿಮಾದಲ್ಲಿ ನಂದಕಿಶೋರ್​ ಮತ್ತು ಚಂದನ್​ ಶೆಟ್ಟಿ ಜೊತೆಯಾಗಿ ಕೆಲಸ ಮಾಡಿದ್ದರು. ಈಗ ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿಗಾಗಿ ಮತ್ತೆ ಒಂದಾಗಿದ್ದಾರೆ. ಮುರಳಿ ಮಾಸ್ಟರ್​ ನೃತ್ಯ ನಿರ್ದೇಶನ ಮಾಡಿದ್ದಾರೆ. ಶೇಖರ್​ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ನುರಿತ ತಂತ್ರಜ್ಞರು ಈ ಹಾಡಿಗಾಗಿ ಕೆಲಸ ಮಾಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.

- Advertisement -

Latest Posts

Don't Miss