ಕೊಲೊಂಬೊ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಲಂಕಾ ಕ್ರಿಕೆಟ್ ಮಂಡಳಿ 18 ಆಟಗಾರರನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಐದು ಬಾರಿ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಎಡಗೈ ಯುವ ವೇಗಿ ದಿಲ್ಶಾನ್ ಶನಕಾಗೆ ಮಣೆ ಹಾಕಿದೆ. ದಾಸಾನು ಶನಕಾ ನೇತೃತ್ವದ ತಂಡದಲ್ಲಿ ಅಶೆನ್ ಬಾಂದಾರಾಗೆ ಕೂಡ ಸ್ಥಾನ ನೀಡಲಾಗಿದೆ.
ತಂಡದಲ್ಲಿ ಅನುಭವಿ ಆಟಗಾರ ದಿನೇಶ್ ಚಾಂಡಿಮಲ್, ಧನಂಜಯ ಡಿಸಿಲ್ವಾ ಮತ್ತು ಜೆಫ್ರಿ ವೆಂಡರೆಸೆಗೂ ಅವಕಾಶ ನೀಡಲಾಗಿದೆ.
ಆ.27ರಂದು ಶ್ರೀಲಂಕಾ ತಂಡ ಅ್ಘನಿಸ್ಥಾನ ವಿರುದ್ಧ ಮೊದಲ ಪಂದ್ಯ ಆಡಲಿದೆ.
ಶ್ರೀಲಂಕಾ ತಂಡ: ದಾಸಾನು ಶನಕಾ(ನಾಯಕ), ದನಶ್ಕು ಗುಣತಿಲಕ, ಪಾಥುಮ್ ನಿಸ್ಸಾಂಕಾ, ಕುಶಾಲ್ ಮೆಂಡಿಸ್, ಚರಿತ್ ಅಸಲಂಕಾ, ಶನುಕಾ ರಾಜಪಕ್ಸೆ, ಆಶೆನ್ ಬಾಂದಾರ , ಧನಂಜಯ ಡಿ ಸಿಲ್ವಾಘಿ, ವನಿಂದು ಹಸರಂಗಾ, ಮಹೇಶ್ ತೀಕ್ಷ್ಣ , ವಂಡರ್‍ಸೆ, ಪ್ರವೀಣ್ ಜಯವಿಕ್ರಮಾ, ಚಾಮಿಕಾ ಕರುಣರತ್ನೆ, ದಿಲ್ಶಾನ್ ಶನಕಾ, ಮಥೀಶಾ ಪಾತಿರಾಣಾ, ನುವಿಂದು ಫೆರ್ನಾಡೊ, ದುಶ್ಮಾಂತಾ ಚಾಮೀರಾ, ದಿನೇಶ್ ಚಾಂಡಿಮಲ್.