Chikkodi News:ಚಿಕ್ಕೋಡಿ : ಅಥಣಿಯಲ್ಲಿ ನಡೆದ 24×7 ನೀರು ಸರಬರಾಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಧ್ಯಮದವರೊಂದಿಗೆ ಮಾತನಾಡಿದರು.
ಲಕ್ಷ್ಮಣ್ ಸವದಿಗೆ ಮಂತ್ರಿ ಸ್ಥಾನ ನೀಡುವ ಊಹಾಪೋಹಗಳು ಇರುವ ಬಗ್ಗೆ ಮಾತನಾಡಿದ ಸವದಿ, ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲವೆಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಬಿಜೆಪಿಗೆ ಬಹುಮತ ಕುರಿತು ಸಚಿವ ಸತೀಶ ಜಾರಕಿಹೊಳಿ ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಅಸಮಧಾನ ಹೊರಹಾಕಿದ್ದರು.
ಲೋಕಸಭೆ ಚುನಾವಣೆ ಬಳಿಕ ಸಾಕಷ್ಟು ಸುದ್ದಿಯಲ್ಲಿದ್ದ ಸವದಿ & ಜಾರಕಿಹೊಳಿ ಟಾಕ್ ವಿವಾದದ ಬಗ್ಗೆ ಸವದಿ ಹೇಳಿಕೆ ಕೊಟ್ಟಿದ್ದು, ಹೊಸ ಬಾಂಬ್ ಸಿಡಿಸಿದ್ದಾರೆ. ಬದುಕು ಶಾಶ್ವತವಲ್ಲ, ಅಧಿಕಾರವು ಶಾಶ್ವತ ವಲ್ಲ ನಾವು ಮಾಡುವ ಒಳ್ಳೆ ಕಾರ್ಯ ನಮ್ಮನ್ನ ಗುರುತಿಸುತ್ತದೆ. ಯಾರೋ ತಿಳ್ಕೊಂಡಿರಬಹುದು ಸಚಿವ ಸ್ಥಾನಕ್ಕಾಗಿ ನಾನು ಯಾರ ಹತ್ರನು ಕೈ ಒಡ್ಡಲ್ಲ. ಮರೆತು ಬಿಡಿ ಎನ್ನುವ ಮೂಲಕ ಸವದಿ, ಜಾರಕಿಹೊಳಿ ಮಾತಿಗೆ, ಸಾಫ್ಟ್ ಆಗಿಯೇ ತಿರುಗೇಟು ನೀಡಿದ್ದಾರೆ.