ರಾಯಚೂರು ವಿಶೇಷ
ರಾಯಚೂರು ಗ್ರಾಮೀಣದ ಮಾಜಿ ಶಾಸಕ, ತಿಪ್ಪರಾಜು ಹವಲ್ದಾರ್ ಅವರ ಜನ್ಮದಿನಾಚರಣೆಯನ್ನು ಅಭಿಮಾನೋತ್ಸವ ಎಂಬ ಕಾರ್ಯಕ್ರಮದಡಿಯಲ್ಲಿ ಅತ್ಯಂಯ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು, ನಂತರ ಪಂಚಮುಖಿ ಆಂಜನೇಯನ ಆಶೀರ್ವಾದ ಪಡೆದ ತಿಪ್ಪರಾಜು, ಗಿಲ್ಲೇಸೂಗುರು ಕ್ಯಾಂಪ್ ನಿಂದ ಬೃಹತ್ ಬೈಕ್ ರಾಲಿಯ ಮೂಲಕ, ಮದ್ಯಾಹ್ನ 12 ಗಂಟೆಯ ಹೊತ್ತಿಗೆ ಮಿಟ್ಟಿ ಮಲ್ಕಾಪುರದ ಶಾಂತಾಶ್ರಮದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಬಹಿರಂಗ ವೇದಿಕೆಗೆ, ಸಹಸ್ರಾರು ಕಾರ್ಯಕರ್ತರೊಡನೆ ಆಗಮಿಸಿದರು. ಅವರ ಆಗಮನವಾಗುತ್ತಿದ್ದಂತೆ, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.
ಜನನಾಯಕನ ಹುಟ್ಟು ಹಬ್ಬದ ನಿಮಿತ್ತ ಕ್ರಿಕೇಟ್ ಆಯೋಜನೆ, ವಿಜೇತರಿಗೆ ನಗದು ಬಹುಮಾನ.
ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಕ್ರಿಕೆಟ್ ವಿಜೇತರಿಗೆ,ಪ್ರಥಮ ಬಹುಮಾನ 10000, ದ್ವಿತೀಯ ಬಹುಮಾನ 50000, ಕಬಡ್ಡಿ, ವಿಜೇತರಿಗೆ ಪ್ರಥಮ ಬಹುಮಾನ 10000, ದ್ವಿತೀಯ ಬಹುಮಾನ 50000, ಕೈಕಲ್ಲು ಎತ್ತುವ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 101 ತೊಲೆ ಬೆಳ್ಳಿ, ದ್ವಿತೀಯ ಬಹುಮಾನ 51 ತೊಲೆ ಬೆಳ್ಳಿ, ಹಾಗೂ ಕ್ವಿಜ್ ಸ್ಪರ್ಧೆಯ ಪುರುಷ ಹಾಗೂ ಮಹಿಳಾ ವಿಜೇತರಿಗೆ, ಪ್ರತ್ಯೇಕವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಕ್ರಮವಾಗಿ, 10000, ಮತ್ತು 5000 ರುಪಾಯಿ ಗಳನ್ನ ನೀಡಿ ಗೌರವಿಸಲಾಯಿತು.
ಶ್ರೀ ಗಳಿಂದ ವೇದಿಕೆ ಉದ್ಗಾಟನೆ
ವೇದಿಕೆ ಕಾರ್ಯಕ್ರಮದಲ್ಲಿ, ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಉಡುಮಗಲ್ ಖಾನಾಪುರದ ಶ್ರೀ ವೀರ ಸಂಗಮೇಶ್ವರ ಶ್ರೀಗಳು, ಗಾರಲದಿನ್ನಿಯ ಮೌನೇಶ ಮಹಾರಾಜ ಸ್ವಾಮಿಗಳು, ಸಲ್ತಾನಪುರದ ಶ್ರೀಗಳು ಹಾಗೂ ಶಾಂತಾಶ್ರಮದ ಶ್ರೀಗಳು ಸಾನಿದ್ಯ ವಹಿಸಿ ಆಶೀರ್ವದಿಸಿದರು,
ನಾಯಕನ ಜಯಂತಿಯಲ್ಲಿ ಮಹಿಳೆಯರು ಭಾಗಿ
ಸಂಪೂರ್ಣ ರಾಯಚೂರು ಜಿಲ್ಲಾ ಬಿಜೆಪಿ, ಹಾಗೂ ರಾಯಚೂರು ಗ್ರಾಮೀಣ ಮಂಡಲದ ಭಾಜಪಾ ಮುಖಂಡರುಗಳು, ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಎಸ್ಟಿ ಮೋರ್ಚಾದ ಪದಾಧಿಕಾರಿಗಳು ಆಗಮಿಸಿ ಶುಭ ಕೋರಿದರು. ಅಭಿಮಾನೋತ್ಸವ ಎಂಬ ಹೆಸರಿನಡಿ ಕಳೆದ 15 ದಿನಗಳ ಕಾಲ ಇಡೀ ರಾಯಚೂರು ಗ್ರಾಮಾಂತರದಲ್ಲಿ ವಿವಿಧ ಕಾರ್ಯಕ್ರಮಗಳನ್ನ ಏರ್ಪಡಿಸಿ, ತಿಪ್ಪರಾಜು ಅವರ ಅಭಿಮಾನಿಗಳು, ಸಂಭ್ರಮಿಸಿದ್ದರ ಪರಿಣಾಮ ಸುಮಾರು 25000 ಕ್ಕೂ ಹೆಚ್ಚು ಜನ ಆಗಮಿಸಿದ್ದರೆ, ಇದೇ ಮೊದಲ ಬಾರಿಗೆ ಎಂಬಂತೆ, ಸುಮಾರು 10,000 ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶ್ರೀಗಳ ಆಶೀರ್ವಚನ ಮುಗಿಯುತ್ತಿದ್ದಂತೆ, ತಿಪ್ಪರಾಜುಗೆ ಶುಭಕೋರಲು ಮುಗಿಬಿದ್ದ, ಅಭಿಮಾನಿಗಳನ್ನ ನಿಯಂತ್ರಿಸಲು ಪೋಲಿಸರು ಹರಸಹಾಸ ಪಡಬೇಕಾಯಿತು, ತಮ್ಮ ನಾಯಕನಿಗೆ ಶುಭ ಕೋರಲು ಬೈಕ್, ಟ್ರಾಕ್ಟರ್, ಆಟೋ, ಟ್ರಾಕ್ಸ್, ಕಾರ್ ಗಳಲ್ಲಿ ಆಗಮಿಸಿದ್ದ ಸಹಸ್ರಾರು ಜನ ಸಂಜೆ 7 ಗಂಟೆಯ ವರೆಗೆ ಹಾರ, ಶಾಲು, ಕೇಕ್ ಗಳ ತಂದು ಸನ್ಮಾನಿಸುತ್ತಲೇ ಇದ್ದರು, ಮದ್ಯಾಹ್ನ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ, ವಾಹನ ಸಂಚಾರಕ್ಕೆ ವ್ಯತ್ಯಯವೂ ಉಂಟಾಗಿತ್ತು.