Saturday, November 23, 2024

Latest Posts

ವರ್ತಮಾನ ಕಾಲದಲ್ಲಿ ನೆಮ್ಮದಿಯಾಗಿ ಜೀವಿಸುವುದನ್ನು ಕಲಿಯಿರಿ

- Advertisement -

Health Tips: ನೀವು ಹೆಚ್ಚು ದುಃಖದಲ್ಲಿ ಇದ್ದೀರಿ ಅಂದ್ರೆ ಅದಕ್ಕಿರುವ ದೊಡ್ಡ ಕಾರಣ ಅಂದ್ರೆ, ಕಳೆದು ಹೋದ ಸಮಯದ ಬಗ್ಗೆ ನೀವು ಹೆಚ್ಚು ಯೋಚಿಸುವುದು. ಹೌದು, ಉದಾಹರಣೆಗೆ ನೀವು ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರೆ, ಅದರ ಬಗ್ಗೆಯೇ ನೀವು ಹೆಚ್ಚು ಯೋಚಿಸಿಯೇ, ನಿಮ್ಮ ದುಃಖ ಹೆಚ್ಚು ಮಾಡಿಕೊಂಡಿರುತ್ತೀರಿ. ಇಂದು ನಾವು ವರ್ತಮಾನ ಕಾಲದಲ್ಲಿ ನೆಮ್ಮದಿಯಾಗಿ ಜೀವಿಸುವುದು ಹೇಗೆ ಅಂತಾ ತಿಳಿಯೋಣ.

ಯೋಗ ಗುರು ಪತಂಜಲಿ ಮಹರ್ಷಿಗಳು ವರ್ತಮಾನದಲ್ಲಿ ಯಾವ ರೀತಿ ಜೀವಿಸಬೇಕು ಎಂದು ಹೇಳಿದ್ದಾರೆ. ವರ್ತಮಾನದಲ್ಲಿ ಜೀವಿಸಲು ಇರುವ ಅತ್ಯುತ್ತಮ ಮಾರ್ಗ ಎಂದರೆ, ಯೋಗ. ಯೋಗ ಧ್ಯಾನ ಯಾರು ಮಾಡುತ್ತಾರೋ, ಅವರು ಭೂತ, ಭವಿಷ್ಯದ ಚಿಂತೆ ಬಿಟ್ಟು, ಆರಾಮದಾಯಕವಾಗಿ ಜೀವಿಸುತ್ತಾರೆ. ನೆಮ್ಮದಿಯಿಂದ ಇರುತ್ತಾರೆ. ಅವರಿಗೆ ಮಾನಸಿಕ ಒತ್ತಡವಿರುವುದಿಲ್ಲ.

ಎರಡನೇಯದಾಗಿ ಬರೀ ಕೆಲಸವೆಂದು ಇರದೇ, ಕುಟುಂಬಸ್ಥರ ಜೊತೆ ಖುಷಿ ಖುಷಿಯಾಗಿ ಕಳಿಯಿರಿ. ಇಲ್ಲವಾದಲ್ಲಿ, ನೀವೊಬ್ಬರೇ ಏಕಾಂಗಿಯಾಗಿ, ಸುಂದರ ಸ್ಥಳಕ್ಕೆ ಹೋಗಿ, ಸಮಯ ಕಳೆದು ಬನ್ನಿ. ಇದರಿಂದ ನಿಮ್ಮ ಮನಸ್ಸು ಚಾರ್ಜ್ ಆಗುತ್ತದೆ. ಮತ್ತೆ ಚೈತನ್ಯದಾಯಕರಾಗಿ ನೀವು ಜೀವನ ನಡೆಸಲು ಸಹಾಯವಾಗುತ್ತದೆ. ಯಾಕಂದ್ರೆ ಮನುಷ್ಯನಿಗೆ ಜೀವನದಲ್ಲಿ ಮಾನಸಿಕ ನೆಮ್ಮದಿಗಾಗಿ ಬ್ರೇಕ್ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ.

ವರ್ತಮಾನದಲ್ಲಿ ಇರದೇ, ಹೆಚ್ಚು ಭೂತಕಾಲ, ಭವಿಷ್ಯದ ಬಗ್ಗೆ ಯೋಚಿಸುವವರು ಕೆಟ್ಟ ಚಟವಿರುವವರು. ಹಾಗಾಗಿ ಕೆಟ್ಟ ಚಟವಿದ್ದರೆ, ಅದನ್ನು ಇಂದೇ ಬಿಟ್ಟು ಬಿಡಿ. ಆರೋಗ್ಯಕರ ಜೀವನ ಜೀವಿಸಲು ಪ್ರಾರಂಭಿಸಿ. ಇದು ನಿಮಗೂ, ನಿಮ್ಮ ಆತ್ಮೀಯರ ಭವಿಷ್ಯ ಎರಡಕ್ಕೂ ಉತ್ತಮ.

- Advertisement -

Latest Posts

Don't Miss