Political News: ಮಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ, ಕೋಮುಸಂಘರ್ಷ ಇನ್ನೂ ಹೆಚ್ಚಿದೆ ಎಂದು ಜನರಲ್ಲಿ ಭೀತಿ ಹುಟ್ಟಿಸುವ ಕೆಲಸವನ್ನು ವೇದವ್ಯಾಸ ಕಾಮತ್ ಮಾಡುತ್ತಿದ್ದಾರೆ. ಆದರೆ ಅವರ ಸರ್ಕಾರ ಇರುವಾಗ ಮಾಡಿದ್ದ ಎಡವಟ್ಟಿನಿಂದಾಗಿ, ಮಳೆ ಶುರುವಾದ ಮೇಲೆ ಪ್ರವಾಹ ಭೀತಿ ಎದುರಾಗಿದೆ. ಮೊದಲು ಅದರ ಬಗ್ಗೆ ಗಮನ ಹರಿಸಲಿ ಎಂದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ತಿರುಗೇಟು ನೀಡಿದ್ದಾರೆ.
ಅಲ್ಲದೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ರಾಜ್ಯದಲ್ಲಿ ಜನ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್ಸಿಗೂ ಸಂಸ್ಕೃತಿ, ಸಂಸ್ಕಾರದ ಅರಿವಿದೆ. ಬಿಜೆಪಿ ಜನರನ್ನ ಮರಳು ಮಾಡುವುದನ್ನ ಮೊದಲು ಬಿಡಲಿ. ಈ ಬಾರಿ ನಿಮ್ಮ ನಾಟಕ ನಡೆಯುವುದಿಲ್ಲ. ಕಾಂಗ್ರೆಸ್ ಸದಾ ಬಡವರ ಪರ ಇರುತ್ತದೆ. ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದೇ ಕಾಂಗ್ರೆಸ್ ಗುರಿ ಎಂದು ಪದ್ಮರಾಜ್ ಹೇಳಿದ್ದಾರೆ.
ವೇದವ್ಯಾಸ ಬರೀ ತಮ್ಮ ಭಾಷಣದಿಂದಲೇ ಜನರನ್ನು ಮರಳು ಮಾಡಿದ್ದಾರೆ ಹೊರತು, ಅವರ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯೂ ಮಾಡಲಿಲ್ಲ. ಈ ಬಗ್ಗೆ ಅವರು ಮೊದಲು ಗಮನ ಹರಿಸಲಿ ಎಂದು ಪದ್ಮರಾಜ್ ಹೇಳಿದ್ದಾರೆ.
‘ಎಂಜಿನಿಯರ್ ಸೂಲಿಬೆಲೆ ಬಗ್ಗೆ, ಪಿಯುಸಿ ಫೇಲ್ ಪ್ರಿಯಾಂಕ್ ಖರ್ಗೆ ಮಾತನಾಡುವುದು ವಿಪರ್ಯಾಸ’
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡುತ್ತಿದೆ’
ಕಾಂಗ್ರೆಸ್ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್: ಸ್ಫೋಟಕ ಅಂಶಗಳನ್ನು ಬಯಲು ಮಾಡಿದ ಹೆಚ್ಡಿಕೆ