Police ಪಡೆಯಿಂದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ..!

ರಾಯಚೂರು : ಖಾಕಿ ಬಟಾಲಿಯನ್ ನ ಅತ್ಯದ್ಭುತ ಎಕ್ಸಿಬ್ಯುಷನ್ (Exhibition).  ಅಲ್ಲಿ ಹಿಂದುಳಿದ ಆ ಭಾಗದ ವಿದ್ಯಾರ್ಥಿಗಳು ಇವತ್ತು ವೆಪನ್ಸ್ (Weapons), ಡಾಗ್ ಸ್ಕ್ವಾಡ್ (Dog Squad) ನ ಟ್ರೈನಿಂಗ್ ಪಡೆದ್ರು. ಅರರೇ, ವಿದ್ಯಾರ್ಥಿಗಳಿಗೆ ಪೊಲೀಸ್ ಟ್ರೈನಿಂಗ್  ಕೊಟ್ರಾ..? ಯಾಕೆ ಅಂತಿರಾ ಆ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್ ಸ್ಟೋರಿ. ರಾಜ್ಯ ಪೊಲೀಸ್ ಇಲಾಖೆ (State Police Department) ಯಿಂದ ಪ್ರತಿ ವರ್ಷದ ಡಿಸೆಂಬರ್ ನಲ್ಲಿ ಅಪರಾಧ ತಡೆ (Crime prevention) ಮಾಸಾಚರಣೆ ಅನ್ನೋ ಕಾರ್ಯಕ್ರಮ ನಡೆಸ್ತಾರೆ. ಅದೇ ರೀತಿ ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸರು ರಾಜ್ಯದಲ್ಲೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗಾಗಿಯೇ ವಿಭಿನ್ನವಾಗಿ ಈ ಕಾರ್ಯಕ್ರಮವನ್ನು  ಮಾಡಿದ್ರು. ಇಲ್ಲಿ ಲಿಂಗಸುಗೂರು ಸುತ್ತಲಿನ ಸುಮಾರಿ 2000 ವಿದ್ಯಾರ್ಥಿಗಳು ಪೊಲೀಸ್ ಡಿಪಾರ್ಟ್ಮೆಂಟಲ್ ಟ್ರೈನಿಂಗ್ ನಲ್ಲಿ ಭಾಗಿಯಾಗಿ,ತರಬೇತಿ ಜೊತೆ ಸಖತ್ ಎನ್ಜಾಯ್ ಮಾಡಿದ್ರು.

ಲಿಂಗಸುಗೂರು ಪೊಲೀಸರು, ಅಪರಾಧಗಳ ನೈಜತೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ್ರು. ಪೊಲೀಸ್ ವೆಪನ್ಸ್, ಎಫ್ ಎಸ್ ಎಲ್ ಎಕ್ವಿಪ್ ಮೆಂಟ್ಸ್ ಗಳ ಕಾರ್ಯ ವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ರು. ಇದರ ಜೊತೆ ಅಣಕು ಶವವಿಟ್ಟು, ಅಲ್ಲಿ ಕ್ರೈಂ ಸೀನ್ ಕ್ರಿಯೆಟ್ (Crime Scene Creature) ಮಾಡಿದ್ರು. ಆ ಮೂಲಕ ಅದು ಕೊಲೆಯೋ..?ಇಲ್ಲ ಆತ್ಮಹತ್ಯೆಯೋ ಅನ್ನೋದರ ಬಗ್ಗೆ ವಿದ್ಯಾರ್ಥಿಗಳಿಂದಲೇ ತನಿಖೆ ಮಾಡಿಸಲಾಯ್ತು. ಇದಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಪೊಲೀಸ್ ಶ್ವಾನ “ಸಿರಿ”, ಅಪರಾಧ ಪತ್ತೆ(Detection of crime) ಕಾರ್ಯದ ಹೇಗೆ ಇರತ್ತೆ ಅನ್ನೋದನ್ನು ತೋರಿಸ್ತು.  ಈ ವೇಳೆ ರಾಯಚೂರು ಎಸ್ ಪಿ ನಿಖಿಲ್ (S P Nikhil)ಮಾತನಾಡಿ, ಅಪರಾಧ ನಡೆದಾಗ ಪ್ರತಿಯೊಬ್ಬರೂ ಪೊಲೀಸರಿಗೆ ಸ್ಪಂಧಿಸಬೇಕು. ಅಪರಾಧಗಳ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸ ಮಾಡಬೇಕು ಅಂತ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದ್ರು. ಇದೇ ಕಾರ್ಯಕ್ರಮದಲ್ಲಿ ಕೊಲೆ,ಸುಲಿಗೆ,ಸರಗಳ್ಳತನದಂತಹ ಗಂಭೀರ ಪ್ರಕರಣಗಳ ಬಗ್ಗೆ ಪೋಸ್ಟರ್ ಮಾಡಿ, ವಿದ್ಯಾರ್ಥಿಗಳಿಗೆ ಆಯಾ ಐಪಿಸಿ ಸೆಕ್ಷನ್ ಹಾಗೂ ಶಿಕ್ಷೆ ಪ್ರಮಾಣದ ಬಗ್ಗೆಯೂ ಮಾಹಿತಿ ನೀಡಿದ್ರು. ಅದೇನೇ ಇರಲಿ ಲಿಂಗಸುಗೂರು ಪೊಲೀಸರು ವಿದ್ಯಾರ್ಥಿಗಳಿಗೆ ಅಸಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಪ್ರಾಕ್ಟಿಕಲ್ ತರಬೇತಿ (Practical training) ಕೊಟ್ಟಿದ್ದು ಮೆಚ್ಚುವಂಥದ್ದು.

                                                                             ಅನಿಲ್ ಕುಮಾರ್ ,ಕರ್ನಾಟಕ ಟಿವಿ,ರಾಯಚೂರು.

About The Author