Tuesday, November 18, 2025

Latest Posts

ಮೊದಲು ಸಿಎಂಗೆ ಮತ್ತು ಹೋಮ್ ಮಿನಿಸ್ಟರ್‌ಗೆ ಡ್ರಿಲ್ ಮಾಡಿಸಲಿ: ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಪೊಲೀಸರು ಪ್ರತಿ ಎರಡು ಗಂಟೆಗೆ ಡ್ರೀಲ್ ಮಾಡಬೇಕು ಎನ್ನುವ ಆದೇಶ ಹಿನ್ನೆಲೆ, ಮೊದಲು ಸಿಎಂ ಗೆ ಮತ್ತು ಹೋಮ್ ಮಿಸ್ಟರ್ ಗೆ ಡ್ರೀಲ್ ಮಾಡಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರಿಗೆ ಸಾಕಷ್ಟು ಒತ್ತಡ ಇದೆ. ಇಂದು ಪೊಲೀಸರು ದೊಡ್ಡ ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಔರಾಧ್ ಕರ್ ವರದಿ ಇನ್ನೂ ಜಾರಿ ಮಾಡಿಲ್ಲ. ಎರಡು ಗಂಟೆಗೊಮ್ಮೆ ಡ್ರೀಲ್ ಮಾಡಿ ಅಂದರೆ ಅವರು ಎಲ್ಲಿಂದ ಮಾಡಬೇಕು. ಪೊಲೀಸರು ಹುಚ್ಚರತರಹ ರಸ್ತೆಯಲ್ಲಿ ಓಡಾಡಬೇಕಾ..? ಹೀಗೆ ಮಾಡಿದರೆ ಜನ ಏನು ಹೇಳತ್ತಾರೆ. ಬುದ್ಧಿ ಇಲ್ಲ ಏನಾದರೂ ಆದೇಶ ಮಾಡತ್ತಾರೆ. ಕರ್ನಾಟಕ ಸರ್ಕಾರ ಮತಿಭ್ರಮಣೆಗೊಂಡಿದೆ. ಪೊಲೀಸರಿಗೆ ಹೊರಡಿಸಿರುವ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಚನ್ನಗಿರಿ ಲಾಕ್ ಅಪ್ ಡೆತ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಸಿದ್ದರಾಮಯ್ಯನವರು ಯಾವುದೇ ವಿಚಾರದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿಲ್ಲಾ. ಅಂಜಲಿ , ನೇಹಾ ಹಿರೇಮಠ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಆಗಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಯಾಕೆ..? ನೀವು ಎಷ್ಟು ತುಷ್ಟಿಕರಣದ ರಾಜಕೀಯ ಮಾಡಿತ್ತಿದ್ದಿರಿ. ನಿಮ್ಮ ಈ ತುಷ್ಟಿಕರಣ ರಾಜಕೀಯದ ಅರಾಜಕತೆ ಸೃಷ್ಟಿ ಆಗುತ್ತದೆ. ಅಲ್ಪ ಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ. ಯಾರೇ ಗಲಭೆ ಮಾಡಿದ್ರೂ ತಪ್ಪು ಅದನ್ನು ಖಂಡಿಸಿ. ಈ ವಿಚಾರದಲ್ಲಿ ಪೊಲೀಸ್ ನೈತಿಕತೆ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದಾಗಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಪೊಲೀಸರು ಠಾಣೆ ಬಿಟ್ಟು ಓಡಿಹೋಗತ್ತಾರೆ ಎಂದು ಜೋಶಿ ಆರೋಪಿಸಿದ್ದಾರೆ.

ಮಾದಕ ವಸ್ತು ವಿಚಾರದಲ್ಲಿ ಕರ್ನಾಟಕ ಪಂಜಾಬ್ ಅನ್ನು ಮೀರಿಸಲು ಹೊರಟಿದೆ. ರಾಜ್ಯ ಸರ್ಕಾರದ ಬೀಜವಾಬ್ದಾರಿ ಇದೇ ರೀತಿ ಮುಂದುವರೆದಲ್ಲಿ ಪಂಜಾಬ್ ಅನ್ನು ಮೀರಿಸುತ್ತದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮನೇಸ್ ನಡೀತಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿ, ಎರಡು ತಾಸಿಗೊಮ್ಮೆ ಪೊಲೀಸರು ವ್ಯಾಯಮ ಮಾಡಬೇಕೆಂಬ ಆದೇಶಕ್ಕೆ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯ ಉಗ್ರರ ಸ್ಲೀಪಿಂಗ್ ಸೆಲ್ ಆಗಿ ಮಾರ್ಪಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಮತಾಂಧರಿಗೆ ಕರ್ನಾಟಕ ಸುರಕ್ಷಿತ ತಾಣ ಆನಿಸಿಬಿಟ್ಟಿದೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಇವರು ಬೇರೆ ಅರ್ಥ ಕೊಡೋಕೆ ಹೋದ್ರು ಒಬ್ಬರು ಸಿಲಿಂಡರ್ ಬ್ಲಾಸ್ಟ್ ಅಂದರು. ಖುದ್ದು ಡಿಸಿಎಂ ವೃತ್ತಿ ಮತ್ಸರ್ಯ ಅಂತ ಹೇಳಿದ್ರು. ಇದೆಲ್ಲವೂ ಕಾಂಗ್ರೆಸ್ ತುಷ್ಟಿಕರಣದ ಫಲ. ಉಗ್ರ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ನಿಭಾಯಿಸಲು ಆಗುತ್ತಿಲ್ಲ. ಇದೀಗ ಎನ್.ಐ.ಎ ತಂಡ ಹುಬ್ಬಳ್ಳಿಯಲ್ಲಿಯೂ ಓರ್ವನನ್ನು ಬಂಧಿಸಿದೆ. ಈ ಘಟನೆ ಕರ್ನಾಟಕದ ಪೊಲೀಸರ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಉಗ್ರ ಇಲ್ಲೇ ಇದ್ದರೂ ನಮ್ಮ ಗೃಹ ಇಲಾಖೆಗೆ ಗೊತ್ತೇ ಆಗಿಲ್ಲ. ಎನ್ ಐ ಎ ತಂಡವೇ ಬಂದು ಅರೆಸ್ಟ್ ಮಾಡೋ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಮಲಗಿದೆ ಅನ್ನೋ ಸ್ಥಿತಿಯಲ್ಲಿದೆ. ಮತಾಂಧರಿಗೆ ಆಶ್ರಯ ಕೊಡುವ ರೀತಿಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ.

ಸಾಮಾನ್ಯ ವ್ಯಕ್ತಿಯ ಪಾಸ್ ಪೋರ್ಟ್ ರದ್ದು ಮಾಡಬೇಕು ಅಂದರೆ ಒಂದು ಪ್ರತಿಕ್ರಿಯೆ ಇದೆ. ಆ ಪ್ರಕ್ರಿಯೆ ಬಿಟ್ಟು ನಾವು ಏನು ಮಾಡಲು ಬರೋದಿಲ್ಲ. ಪ್ರಧಾನಿ, ವಿದೇಶಿ ಮಂತ್ರಿ ಸೇರಿದಂತೆ ಯಾರು ಪತ್ರ ಬರೆದರು ಆಗೋದಿಲ್ಲ. ಯಾರ ಮೇಲೆ ಏನು ಆರೋಪಯಿದೆ, ಏನು ಎಫ್ ಐ ಆರ್ ಇದೆ ಅಂತ ಪೊಲೀಸ್ ಇಲಾಖೆ ಕೇಂದ್ರ ಸರ್ಕಾರಕ್ಕೆ ಹೇಳಬೇಕು. ಸಿಎಂ ಪತ್ರ ಬರೆದು ರಾಜಕೀಯ ಮಾಡಿದ್ರೆ ಆಗಲ್ಲ. ಪ್ರಜ್ವಲ್ ಮೇಲೆ ಎಂದು ಆರೋಪ ಬಂತೋ ಅಂದಿನಿಂದಲೂ ಬಂಧನ ಒತ್ತಾಯ ಮಾಡುತ್ತಿದ್ದೇನೆ. ಪ್ರಜ್ವಲ್ ವಿಚಾರದಲ್ಲಿ ಯಾವದೇ ಕದ್ದು ಮುಚ್ಚಿ ಮಾತನಾಡಲ್ಲ ಅಸ್ಪಷ್ಟ ಉತ್ತರ ಇಲ್ಲ. ಆದರೆ ನಿಮ್ಮ ತಪ್ಪು ಮುಚ್ಚಿಕೊಳ್ಳಲು, ಬೇಕಂತಲೇ, ದುರುದ್ದೇಶದಿಂದ ಮಾಡಿ. ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡಿದ್ರೆ ಹೇಗೆ..? ಸಿದ್ದರಾಮಯ್ಯ ಮಗ ಸಾವಿನ ವಿಚಾರದಲ್ಲಿ ನಾನು ಜಾಸ್ತಿ ಮಾತೋಡಲ್ಲ. ನಾವು ಕನಿಷ್ಠ ಮಾನವೀಯತೆ ಇಟ್ಟುಕೊಂಡು ರಾಜಕೀಯ ಮಾಡಬೇಕು. ಕುಮಾರಸ್ವಾಮಿ ಅವರು ನೋವಿನಿಂದ ಮಾತನಾಡುತ್ತಿದ್ದಾರೆ ಅದನ್ನು ತಪ್ಪು ಅಂತ ಹೇಳಲ್ಲ. ಪ್ರಜ್ವಲ್ ದೇಶ ಬಿಡಲು ಬಿಟ್ಟವರೇ ರಾಜ್ಯ ಸರ್ಕಾರದವರು ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ, ತಾಲೂಕು,ಜಿಲ್ಲಾ,ಬಿಬಿಎಂಪಿ ಚುನಾವಣೆ ನಡೆಸಲಾಗುವುದು: ಸಿಎಂ

ಆರ್‌ಸಿಬಿಯನ್ನು ಅಣಕಿಸಿದ್ದಕ್ಕೆ ನಟಿಗೆ ಖಡಕ್ ರಿಪ್ಲೈ ಕೊಟ್ಟ ಫ್ಯಾನ್ಸ್..

ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತ ಕಾಲೇಜ್ ಡೇಸ್ ಮೆಲುಕು ಹಾಕಿದ ಸಿಎಂ

- Advertisement -

Latest Posts

Don't Miss