Sunday, September 8, 2024

Latest Posts

ಪುನೀತ್ ಹೆಸರಿನಲ್ಲಿ ರಾಜ್ಯ ಪೊಲೀಸ್‌ ಗೆ ಆಸ್ಪತ್ರೆ ಕಲ್ಪಿಸುವಂತೆ ಸಿ ಎಂ ಗೆ ಪತ್ರ

- Advertisement -

ಬೆಂಗಳೂರು: ಪುನೀತ್ ರಾಜಕುಮಾರ್ ಹೆಸರಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ರವರಿಗೆ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅವರ ಮಕ್ಕಳಿಗೆ ಉತ್ತಮವಾದ ಉಚಿತ ಶಿಕ್ಷಣ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಯಿಯವರಿಗೆ ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎಸ್.ವಿನಯ್ ಅವರು ಪತ್ರ ಬರೆದಿದ್ದಾರೆ .
ದಕ್ಷಿಣ ಪದವೀಧರ  ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಪದವೀಧರ ನೋಂದಣಿ ಮಾಡಿಸುವ ಸಲುವಾಗಿ ಅನೇಕ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ವಕೀಲರು, ಇಂಜಿನಿಯರಗಳು, ವೈದ್ಯರು, ಸರ್ಕಾರಿ-ಅರೆಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳು, ಪೊಲೀಸ್ ಸಿಬ್ಬಂದಿಗಳು ಹೀಗೆ ಮುಂತಾದ ಲಕ್ಷಾಂತರ ಪದವೀಧರರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅನೇಕರು ತಮಗೆ ಸರ್ಕಾರದಿಂದ ಸಿಗಬೇಕಾಗಿರುವ ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ ತಿಳಿದಿದ್ದು, ಅವರಿಗೆ ಈ ಎಲ್ಲಾ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ .
ಪೊಲೀಸ್ ಸಿಬ್ಬಂದಿಗಳನ್ನು ಭೇಟಿ ಮಾಡಿದಾಗ ಅವರು ಅವರ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಂಡರು ಅವರಿಗೆ ವರ್ಗಾವಣೆಯಲ್ಲಿ ಮತ್ತು ಬಡ್ತಿಯಲ್ಲಿ ತಾರತಮ್ಯಗಳು, ಕೆಲಸದ ಅತಿಯಾದ ಒತ್ತಡದಿಂದ ಅವರಿಗೆ ಆರೋಗ್ಯದ ಸಮಸ್ಯೆಗಳು , ಮುಖ್ಯವಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಸಾಧ್ಯವಾಗದೆ ತಮ್ಮ ಮಕ್ಕಳು ಎಲ್ಲಿ ದಾರಿ ತಪ್ಪುತ್ತಿದ್ದಾರೋ ಎಂಬ ಆಂತಕ, ಬೇರೆ ಬೇರೆ ಇಲಾಖೆಯ ನೌಕರರು ತಮ್ಮ ಬೇಡಿಕೆಗಳನ್ನು ಅಥವ ಸಮಸ್ಯೆಗಳು ಸರ್ಕಾರದ ಮುಂದೆ ಇಟ್ಟು ಮುಷ್ಕರ ಮಾಡಿ ಬೇಡಿಕೆಗಳನ್ನು ಪರಿಹರಿಸಿಕೊಳ್ಳಲು ಅವಕಾಶಗಳಿರುತ್ತವೆ. ಆದರೆ ಕರ್ನಾಟಕ ರಾಜ್ಯ ಪೊಲೀಸ್ ನಿಯಮಗಳು 1965 ರ ಪ್ರಕಾರ ಇವರಿಗೆ ಯಾವುದೇ ಸಂಘ ಕಟ್ಟುವುದಕ್ಕಾಗಲ್ಲಿ, ಮಹಿಳಾ ಸಿಬ್ಬಂದಿಗಳoತೂ ಕರ್ತವ್ಯದ ಒತ್ತಡದಿಂದ ತಮ್ಮ ಮಕ್ಕಳ ಪೋಷಣೆ ಸಾಧ್ಯವಿಲ್ಲದೆ, ಮಕ್ಕಳ ಪ್ರೀತಿಯಿಂದಲೂ ಸಹ ವಂಚಿತರಾಗುತ್ತಿದ್ದಾರೆ.
ಇವರಿಗೆ ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಒಂದು ಆಸ್ಪತ್ರೆ ಮತ್ತು ಅವರ ಮಕ್ಕಳಿಗೆ ಉನ್ನತ ಶಿಕ್ಷಣಕಾಗಿ ಒಂದೇ ಸೂರಿನಡಿಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡುವ ಕ್ರಮ ತೆಗೆದುಕೊಳ್ಳಿ ಎಂದು ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎಸ್.ವಿನಯ್ ಅವರು ಮನವಿ ಮಾಡಿದ್ದಾರೆ.

- Advertisement -

Latest Posts

Don't Miss