Hubballi News: ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಹೊನ್ನಳ್ಳಿಯಲ್ಲಿ ಸೈನಿಕನೊಬ್ಬನ ಹತ್ಯೆಗೆ ಸಂಬಂಧಿಸಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 34 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ.
ಹೌದು.. ಸೈನಿಕ ನಿಂಗಪ್ಪ ಯಲಿವಾಳ ಎಂಬಾತನನ್ನು 2015ರ ಸೆ. 20ರಂದು ಬಸವರಾಜ ಯಲಿವಾಳ ಹಾಗೂ ಇತರ ಆರು ಜನರು ಕೊಲೆಗೈದಿದ್ದರು. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ನಿಂಗಪ್ಪ ಯಲಿವಾಳ ಹಾಗೂ ಆರೋಪಿತರ ಮಧ್ಯೆ ಆಸ್ತಿ ಕುರಿತು ವ್ಯಾಜ್ಯವಿತ್ತು. ಜಿಲ್ಲಾ ನ್ಯಾಯಾಲಯವು 2019ರ ಏ. 18ರಂದು ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು. ಸತ್ರ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಧಾರವಾಡ ಹೈಕೋರ್ಟ್, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ದಂಡದ ಹಣದಲ್ಲಿ ಮೃತರ ತಂದೆ, ತಾಯಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಫಿರ್ಯಾದಿ ಮೃತನ ತಂದೆ ಪರವಾಗಿ ಹಿರಿಯ ನ್ಯಾಯವಾದಿ ಎಲ್.ಎಸ್. ಸುಳ್ಳದ ವಾದ ಮಂಡಿಸಿದ್ದರು. ಸೈನಿಕನ ಕೊಲೆಯಲ್ಲಿ ಭಾಗಿಯಾದವರಿಗೆ ಈಗ ಜೈಲು ಫಿಕ್ಸ್ ಆಗಿದೆ.
‘ನೀವು ಮಂತ್ರಿಯಾಗಿದ್ದವರು, ಗಂಭೀರವಾಗಿರಿ. ರಾಜ್ಯದ ಮರ್ಯಾದೆ ತೆಗಿಬೇಡಿ’
ಕಾಗೋಡು ತಿಮ್ಮಪ್ಪರನ್ನು ಭೇಟಿಯಾದ ಕುಮಾರ್ ಬಂಗಾರಪ್ಪ: ಕಾಂಗ್ರೆಸ್ ಸೇರುವ ಸೂಚನೆಯೇ..?
ಬಸ್‌ನಲ್ಲಿ ಸೀಟ್‌ಗಾಗಿ ಕಿತ್ತಾಡಿದ ಮಹಿಳೆಯರು: ಜಡೆ ಜಗಳಕ್ಕೆ ಸರ್ಕಾರದ ಬಳಿ ಪರಿಹಾರ ಕೇಳಿದ ನೆಟ್ಟಿಗರು..