Life Lesson: ಈ ಪ್ರಪಂಚದಲ್ಲಿ ಯಾರಿಗೆ ತಾನೇ ಶ್ರೀಮಂತರಾಗುವುದು ಇಷ್ಟವಿಲ್ಲಾ ಹೇಳಿ..? ಹಾಗೆ ನೋಡಿದರೆ ಎಲ್ಲರಿಗೂ ಬೇಗ ಬೇಗ ಶ್ರೀಮಂತರಾಗಬೇಕು ಎನ್ನುವ ಹಂಬಲವೇ ಇದೆ. ಆದರೆ ನಿಯತ್ತಾಗಿ, ಬುದ್ಧಿವಂತಿಕೆ ಉಪಯೋಗಿಸಿದ ಯಾರೂ ಬೇಗ ಬೇಗ ಶ್ರೀಮಂತರಾಗಲಿಲ್ಲ. ಬದಲಾಗಿ, ತಾಳ್ಮೆಯಿಂದ ಕೆಲಸ ಮಾಡಿ, ಹೂಡಿಕೆ ಮಾಡಿ, ಲಾಭಕ್ಕಾಗಿ ಕಾದು ಶ್ರೀಮಂತರಾಗಿದ್ದಾರೆ. ಹಾಗಾದ್ರೆ ಮೌನವಾಗಿದ್ದು ಶ್ರೀಮಂತರಾಗೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಇಟಿಎಫ್: ಶ್ರೀಮಂತರಾಗಲು 5ರಿಂದ 10 ವರ್ಷಗಳ ಕಾಲ ತಾಳ್ಮೆಯಿಂದ ಇರಬಲ್ಲವರು ನೀವಾದರೆ, ಹೆಚ್ಚು ಟೆನ್ಶನ್ ಇಲ್ಲದೇ ಶ್ರೀಮಂತರಾಗಬಯಸುವವರು ನೀವಾದರೆ, ನೀವು ಇಟಿಎಫ್ನಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಹಲವು ಕಂಪನಿಗಳ ಮಿಶ್ರಣವಿದ್ದು, ಮಾರ್ಕೇಟ್ ಬಿದ್ದರೂ ನಿಮ್ಮ ಅಷ್ಟು ದುಡ್ಡು ಹೋಗುವುದಿಲ್ಲ. ಬದಲಾಗಿ ಯಾವುದಾದರೂ 1 ಕಂಪನಿಯಾದರೂ ಲಾಭ ಹಿಡಿಯುವ ಪ್ರಯತ್ನ ಮಾಡುತ್ತದೆ. ಹಾಗಾಗಿ ಇಟಿಎಫ್ನಲ್ಲಿ ಸೇಫ್ ಆಗಿ ನೀವು ಹೂಡಿಕೆ ಮಾಡಬಹುದು.
ಎಸ್ಐಪಿ: ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಪ್ರತೀ ತಿಂಗಳು ನೀವು 500ರಿಂದ 5 ಸಾವಿರದವರೆಗೂ ಇಲ್ಲಿ ಇನ್ವೆಸ್ಟ್ ಮಾಡಬಹುದು. ಆದರೆ ಇಲ್ಲಿಯೂ ತಾಳ್ಮೆ ಮುಖ್ಯ. ನೀವು ಎಷ್ಟು ತಾಳ್ಮೆಯಿಂದ ಇರುತ್ತೀರೋ, ಅಷ್ಟು ನೀವು ಹೂಡಿಕೆ ಮಾಡಿದ ಹಣ, ಹೆಚ್ಚುತ್ತದೆ. ನೀವು 5ರಿಂದ 10 ವರ್ಷಗಳ ಕಾಲ ಇಲ್ಲಿ ಹಣ ಹೂಡಿಕೆ ಮಾಡಿದ್ರೆ, ಅದು ಚಕ್ರ ಬಡ್ಡಿಯ ಕೆಲಸ ಮಾಡುತ್ತದೆ.
ಹೂಡಿಕೆ ಮಾಡಿದ ಹಣಕ್ಕೆ ಲಾಭ ಬರುತ್ತದೆ. ಲಾಭ ಬಂದ ಹಣಕ್ಕೂ ಬಡ್ಡಿ ಬರುತ್ತದೆ. ಹೀಗೆ ಬಡ್ಡಿಗೆ ಬಡ್ಡಿ ಸೇರಿ ಚಕ್ರ ಬಡ್ಡಿಯಾಗಿ, ಹಣದ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ. 10 ವರ್ಷ ತಾಳ್ಮೆಯಿಂದ ಇದ್ದರೂ ಸಾಕು, ನೀವು ಅತೀ ಹೆಚ್ಚು ಲಾಭ ಗಳಿಸಬಹುದು.
ಇನ್ನು ಹೂಡಿಕೆ ಅಂದ್ರೆ ಹುಡುಗಾಟವಲ್ಲ. ಸಿಕ್ಕ ಸಿಕ್ಕ ಆ್ಯಪ್ ಬಳಸಿ, ನೀವು ಅದರಲ್ಲಿ ದುಡ್ಡು ಹೂಡಿಕೆ ಮಾಡಿದ್ರೆ, ನೀವು ಮೋಸ ಹೋಗಬಹುದು. ಹಾಗಾಗಿ ಆರ್ಥಿಕ ಸಲಹೆಗಾರರ ಬಳಿ ನೀವು ಸಲಹೆ ಪಡೆದು, ಹಣ ಹೂಡಿಕೆ ಮಾಡಿದರೆ ಉತ್ತಮ.




