ಡ್ರೈವರ್‌ ಸೀಟ್‌ ಇಂದ ಇಲ್ಲಿಯವರೆಗೂ..: Sangeetha.com MD ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಈ ಯಶಸ್ಸಿಗೆ ಪೂರ್ವ ಜನ್ಮದ ಪುಣ್ಯ, ಹಿರಿಯರ ಆಶೀರ್ವಾದ, ಅದೃಷ್ಟ, ಪ್ರಯತ್ನ ಇವೆಲ್ಲವೂ ಕಾರಣ ಎಂದಿದ್ದಾರೆ.

 

ಇನ್ನು ಸುಭಾಷ್ ಚಂದ್ರ ಅವರು ಬಾಲ್ಯದಲ್ಲೇ ತುಂಬಾ ಸಮಸ್ಯೆ ಅನುಭವಿಸಿದ್ದರು. ಆಶ್ಚರ್ಯ ಅಂದ್ರೆ ಇಷ್ಟು ಉನ್ನತ ಮಟ್ಟದಲ್ಲಿ ಬೆಳೆದಿರುವ ಸುಭಾಷ್ ಚಂದ್ರ ಅವರು ಕಾಲೇಜಿಗೂ ಹೋಗಲಿಲ್ಲವಂತೆ. ಅವರು ಕಾಲೇಜಿಗೆ ಹೋಗುವ ದಿನಗಳಲ್ಲಿ ಸಂಗೀತಾ ಎನ್ನುವ ವೆಹಿಕಲ್ ಡ್ರೈವರ್ ಆಗಿ ಕೆಲಸ ಮಾಡಿದ್ದರು. ಆದರೆ ಆ ವೇಳೆ ಸಂಗೀತಾ ಎಂಬ ಕಂಪನಿಯನ್ನು ಈ ಮಟ್ಟಿಗೆ ತರುತ್ತೇನೆ ಎಂದು ಅರಿತಿರಲಿಲ್ಲವಂತೆ.

ಆದರೆ ಇಂದು ಭಾರತದಲ್ಲಿ 800 ಸಂಗೀತಾ ಶೋ ರೂಮ್‌ಗಳಿದೆ. ಅದರಲ್ಲಿ 796 ಸ್ವಂತ ಶೋ ರೂಮ್ ಆಗಿದ್ದು, ಉಳಿದ ನಾಲ್ಕನ್ನು ಮಾತ್ರ ಫ್ರ್ಯಾಂಚಾಯ್ಸಿ ಆಗಿ ನೀಡಲಾಗಿದೆ. ಇಡೀ ಭಾರದಲ್ಲಿ 800 ಶೋ ರೂಮ್ ಇರುವ ಕಂಪನಿ ಅಂದ್ರೆ ಅದು ಸಂಗೀತಾ ಮಾತ್ರ.

ಆದರೆ ಈ ಬಗ್ಗೆ ಮಾತನಾಡಿರುವ ಸುಭಾಷ್ ಅವರು, ನಾವು ಇದೆಲ್ಲ ಮಾಡಿರುವುದು ತೃಣಕ್ಕೆ ಸಮ. ನಮ್ಮ ಮುಂದೆ ಹಲವು ಅವಕಾಶಗಳಿದೆ. ಅದರ ಮುಂದೆ ನಾವು ಮಾಡಿರುವ ಸಾಧನೆ ಏನೇನು ಅಲ್ಲ. ನಾವು ಇನ್ನೂ ಏನಾದ್ರೂ ಮಾಡಬಹುದು ಎಂದು ಸುಭಾಷ್ ಚಂದ್ರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author