Political News: ಅಯೋಧ್ಯೆಯಲ್ಲಿ ತೀವ್ರ ಚಳಿ ಹಿನ್ನೆಲೆ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.
ಅಡ್ವಾಣಿಯವರಿಗೆ ವಯೋಸಹಜ ಅನಾರೋಗ್ಯವಿದ್ದು,ಅಯೋಧ್ಯೆಯಲ್ಲೂ ತೀವ್ರ ಚಳಿ ಇರುವ ಕಾರಣ, ಅವರ ಪ್ರಯಾಣ ರದ್ದಾಗಿದೆ. ಈ ಕಾರಣಕ್ಕೆ ಅಡ್ವಾಣಿ, ಅಯೋಧ್ಯೆ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಇನ್ನು ತಮ್ಮ 96ನೇ ವಯಸ್ಸಿನಲ್ಲಿರುವ ಹಿರಿಯ ನಾಯಕ, ಬಿಜೆಪಿ ಭೀಷ್ಣ ಅಡ್ವಾಣಿಯವರಿಗೂ ಕೂಡ, ರಾಮಮಂದಿರ ಟ್ರಸ್ಟ್ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.
ರಾಮಮಂದಿರ ಹೋರಾಟ ನಡೆಯುವಾಗ ಎಲ್.ಕೆ.ಅಡ್ವಾಣಿಯವರು ಸಹ ಇದರಲ್ಲಿ ಪಾಲ್ಗೊಂಡಿದ್ದರು. ರಾಮಮಂದಿರದ ತೀರ್ಪು ಹಿಂದೂಗಳ ಪರ ಬಂದಾಗಲೂ, ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೇ, ರಾಮಮಂದಿರ ನಿರ್ಮಾಣ ಕಾರ್ಯ ಶುರುವಾದಾಗಲೂ, ಮೋದಿಯವರಿಗೆ ದೇವರ ದಯೆ ಇದೆ. ಹಾಗಾಗಿ ಅವರಿಂದಲೇ ಈ ಶುಭಕಾರ್ಯ ನೆರವೇರುತ್ತಿದೆ ಎಂದು ಅಡ್ವಾಣಿ ಹೇಳಿದ್ದರು.