Wednesday, September 11, 2024

Latest Posts

ಅಯೋಧ್ಯೆ ಕಾರ್ಯಕ್ರಮಕ್ಕೂ ಮುನ್ನ ಹನುಮನ ದರ್ಶನ ಪಡೆದ ರಿಷಬ್ ದಂಪತಿ

- Advertisement -

Movie News: ಭಾರತದ ಗಣ್ಯರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೂ ಕೂಡ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಮಂತ್ರಣ ಬಂದಿತ್ತು. ಈ ಬಗ್ಗೆ ಬರೆದುಕೊಂಡಿದ್ದ ರಿಷಬ್ ಇದು ನಮ್ಮ ಪುಣ್ಯ ಎಂದಿದ್ದರು. ಇದೀಗ, ರಾಮಮಂದಿರ ಉದ್ಘಾಟನೆಗೂ ಒಂದು ದಿನ ಮೊದಲು ಅಯೋಧ್ಯೆಗೆ ತಲುಪಿರುವ ರಿಷಬ್ ದಂಪತಿ, ಹನುಮನ ದರ್ಶನ ಪಡೆದಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ರಿಷಬ್, ಶ್ರೀರಾಮನ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೂ ಮುನ್ನ, ಹನುಮನ ದರ್ಶನ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಕೇಸರಿ ಶಾಲು ಹಾಕಿಕೊಂಡಿರುವ ರಿಷಬ್ ಮತ್ತು ಪ್ರಗತಿ, ಹಣೆಗೆ ಭಂಡಾರ ಹಚ್ಚಿಕೊಂಡಿದ್ದಾರೆ.

ಬಾಲಿವುಡ್ ನಟರಾದ ಅನುಪಮ್ ಖೇರ್, ವಿಕ್ಕಿ ಕೌಶಲ್, ಕತ್ರೀನಾ ಕೈಫ್, ಕಂಗನಾ ರಾಣಾವತ್, ವಿವೇಕ್ ಓಬೆರಾಯ್, ಮೆಗಾಸ್ಚಾರ್ ಚಿರಂಜೀವಿ, ರಾಮ್ ಚರಣ್, ಸೂಪರ್ ಸ್ಟಾಾರ್ ರಜನಿಕಾಂತ್, ನಿಖಿಲ್ ಕುಮಾರ್ ಸೇರರಿ ಹಲವು ಚಿತ್ರತಾರೆಯರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಅಯೋಧ್ಯೆ ಹನುಮನ ಮಂದಿರದ ಅಂಗಳ ಗುಡಿಸಿದ ನಟಿ ಕಂಗನಾ

ಚೆನ್ನೈನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ

‘ಇಂದು ನಿಖಿಲ್ ಅಯೋಧ್ಯೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ಅವನ ಅದೃಷ್ಟವೇ ಸರಿ’

 

- Advertisement -

Latest Posts

Don't Miss