Friday, December 6, 2024

Latest Posts

ಬಿಜೆಪಿ ಸರ್ಕಾರದ ವಿರುದ್ಧ ಅಂಬಿಕಾಪತಿಯ 40% ಆರೋಪ ಸುಳ್ಳೆಂದ ಲೋಕಾಯುಕ್ತ

- Advertisement -

Political news: ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಅಂಬಿಕಾಪತಿ ಎಂಬುವವರು, ಈ ಸರ್ಕಾರ ಯಾವ ಕೆಲಸ ಮಾಡಿಕೊಡಲು 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತದೆ ಎಂದು ಆರೋಪಿಸಿದ್ದರು.

ಇದನ್ನೇ ಹಿಡಿದು ಕಾಂಗ್ರೆಸ್ ಬಿಜೆಪಿ ವಿರುದ್ಧ ಪಾಂಪ್ಲೆಟ್ ಕೂಡ ಅಂಟಿಸಿತ್ತು. ಟೀಕೆ ಮಾಡಿತ್ತು. ಇದೀಗ ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿದ್ದು, 40 ಪರ್ಸೆಂಟ್ ಆರೋಪವೇ ಸುಳ್ಳು ಎಂದಿದೆ. ಇದೊಂದು ಆಧಾರರಹಿತ ಆರೋಪ ಎಂದಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉಮಾಪತಿ ಎಂಬುವವರು ಈ ಆರೋಪ ಮಾಡಿದ್ದರು. ಆದರೆ ಅವರು ಯಾವುದೇ ಗುತ್ತಿಗೆ ಪಡೆದಿಲ್ಲವೆಂದು ಬಹಿರಂಗವಾಗಿದೆ. ಆಟದ ಮೈದಾನಕ್ಕೆ ಸಂಬಂಧಿಸಿದ ಗುತ್ತಿಗೆ ತೆಗೆದುಕೊಂಡಿಲ್ಲ. ಬದಲಾಗಿ ಕೃಷ್ಣಮೂರ್ತಿ ಕಾಮಗಾರಿ ಪೂರ್ಣಗೊಳಿಸಿದ್ದಾರೆಂದು ತಿಳಿದು ಬಂದಿದೆ.

ಅಂಬಿಕಾಪತಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುವಾಗ ತತಾನು ಗುತ್ತಿಗೆ ಪಡೆದಾಗ, ಬಿಜೆಪಿ ಸರ್ಕಾರದವರು 40 ಪರ್ಸೆಂಟ್ ತೆಗೆದುಕೊಂಡಿದ್ದರು. ಮೈದಾನದ ಗುತ್ತಿಗೆ ವಿಚಾರದಲ್ಲಿ ತಾನು ಲಂಚ ನೀಡಿದ್ದೇನೆ ಎಂದಿದ್ದರು. ಆದರೆ ಅವರು ಯಾವುದೇ ಗುತ್ತಿಗೆ ತೆಗೆದುಕೊಂಡಿಲ್ಲವೆಂದು ಸಾಬೀತಾಗಿದೆ.

- Advertisement -

Latest Posts

Don't Miss