ಚಾಮರಾಜನಗರ : ಸಿಮೆಂಟ್ ಲೋಡ್ (Load of cement)ತುಂಬಿದ್ದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗಳ ಮೇಲೆ ಹರಿದು ಲಾರಿ ಮತ್ತು ಬೈಕ್ ಗಳಿಗೆ ಗುದ್ದಿರುವ ಘಟನೆ ನಡೆದಿದೆ. ಹೌದು ಚಾಮರಾಜನಗರ ಕಡೆಯಿಂದ ಸಿಮೆಂಟ್ ಲೋಡ್ ತುಂಬಿಕೊಂಡು ಬರುತ್ತಿದ್ದ KA-01-4824 ನಂಬರಿನ ಲಾರಿಯೊಂದು ಕೊಳ್ಳೇಗಾಲ(kollegala) ನಗರದ ಬಸ್ ನಿಲ್ದಾಣದ ಬಳಿ ವ್ಯಕ್ತಿಗಳ ಮೇಲೆ ಹರಿದಿದ್ದು ಪವಾಡಸದೃಶ ದಂತೆ ಯಾವುದೇ ರೀತಿಯಲ್ಲಿ ಪ್ರಾಣಾಪಯ ಆಗದೆ ನಾಲ್ವರು ಪಾರಾಗಿದ್ದಾರೆ. ಲಾರಿಯನ್ನು ಪೊಲೀಸರು ಚೇಸಿಂಗ್ ಮಾಡಿಕೊಂಡು ಬಂದಾಗ ಲಾರಿಯನ್ನು ನಿಲ್ಲಿಸದ ಲಾರಿ ಡ್ರೈವರ್ ವೇಗದಿಂದ ಲಾರಿಯನ್ನು ಓಡಿಸಿಕೊಂಡು ಎಂ ಜಿ ಎಸ್ ವಿ ಕಾಲೇಜ್ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿ ಹಾಗೂ ಬೈಕ್ ಗಳಿಗೆ ಗುದ್ದಿ ಜಖಂಗೊಳಿಸಿ ಹೋಗುತ್ತಿರುವಾಗ ಅಲ್ಲಿನ ಸಾರ್ವಜನಿಕರು ಲಾರಿಯನ್ನು ಚೇಸಿಂಗ್ ಮಾಡಿಕೊಂಡು ಹೋದಾಗ ಲಾರಿ ಚಾಲಕ ಟೌನ್ ಪೊಲೀಸ್ ಠಾಣೆಯ ಮುಂದೆ ಲಾರಿಯನ್ನು ನಿಲ್ಲಿಸಿ ಪೊಲೀಸ್ ಠಾಣೆಯ ಒಳಗೆ ಹೋಗಿ ಪೊಲೀಸರಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.