Sunday, September 8, 2024

Latest Posts

ಅ.28ರಿಂದ ಲಾರಿ ಮುಷ್ಕರಕ್ಕೆ ತೀರ್ಮಾನ..!?

- Advertisement -

ಬೆಂಗಳೂರು: ಸರ್ಕಾರ ಕೂಡಲೇ ಡೀಸೆಲ್ ಮೇಲಿನ ತೆರಿಗೆ ಇಳಿಸದಿದ್ರೆ ಅ. 28ರಿಂದ ಲಾರಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಪೆಟ್ರೋಲ್ –ಡೀಸೆಲ್ ಮೇಲೆ ಮಿತಿಮೀರಿದ ತೆರಿಗೆ ವಿಸುತ್ತಿರುವುದರಿಂದ ಲಾರಿ ಉದ್ಯಮ ತೀವ್ರ ನಷ್ಟದಲ್ಲಿದೆ. ಹೀಗಾಗಿ ಕೂಡಲೇ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕು ಇಲ್ಲವಾದಲ್ಲಿ ಇದೇ ತಿಂಗಳ 23ರಂದು ಸಭೆ ನಡೆಸಿ ಲಾರಿ ಮುಷ್ಕರ ನೆಡಸಲು ತೀರ್ಮಾನಿಸಲಾಗುತ್ತೆ ಅಂತ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

ಇನ್ನು ಈ ತಿಂಗಳ ಅಂತ್ಯದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಕನಿಷ್ಠ  5 ರಿಂದ 10ರೂ. ಇಳಿಸಬೇಕು. ಇಲ್ಲದಿದ್ದರೆ ನಾವು ಟೋಲ್‍ಗಳಲ್ಲೇ ಗಾಡಿಗಳನ್ನು ನಿಲ್ಲಿಸಿ ಅನಿರ್ದಿಷ್ಟಾವ ಮುಷ್ಕರ ನಡೆಸುತ್ತೇವೆ ಅಂತ ಎಚ್ಚರಿಸಿರೋ ಷಣ್ಮುಗಪ್ಪ, ಸುಮಾರು ಆರು ಲಕ್ಷ ಲಾರಿಗಳಿದ್ದು, ಡೀಸೆಲ್ ಬೆಲೆ ಏರಿಕೆಯಿಂದಾಗಿ ಶೇಕಡಾ 30ರಷ್ಟು ಲಾರಿಗಳ ಓಡಾಟ ಸ್ಥಗಿತಗೊಂಡಿದೆ. ಹೀಗಾಗಿ ಲಾರಿ ಉದ್ಯಮವನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಜನ ಜೀವನ ನಡೆಸಲೂ ಕಷ್ಟಕರವಾಗಿದೆ ಅಂತ ಹೇಳಿದ್ದಾರೆ.

- Advertisement -

Latest Posts

Don't Miss