Tuesday, September 23, 2025

Latest Posts

Lovers day ಅಂತ ಹೇಳಿ ಹೂವಿನ ಹಾರ ಹಾಕಿ MLC ಸ್ಥಾನಕ್ಕೆ ರಾಜೀನಾಮೆ : ಸಿ.ಎಂ.ಇಬ್ರಾಹಿಂ

- Advertisement -

ಮೈಸೂರು: ಕಾಂಗ್ರೆಸ್ ತೊರೆಯುವುದಾಗಿ ನಿರ್ಧರಿಸಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ, ಫೆ.14ರಂದು ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಇಬ್ರಾಹಿಂ, ಫೆ.14ರಂದು ರಾಜೀನಾಮೆ ಕೊಡುತ್ತೇನೆ.

ಅಂದೇ ನನ್ನ ಮುಂದಿನ ರಾಜಕೀಯ ಜೀವನದ ಬಗ್ಗೆಯೂ ನಿರ್ಧಾರ ಮಾಡ್ತೀನಿ. ಲವರ್ಸ್ ಡೇ ಅಂತ ಹೇಳಿ ಹೂವಿನ ಹಾರ ಹಾಕಿ ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ. ಆದರೆ ಯಾವುದೇ ಹೊಸ ಪಕ್ಷ ಕಟ್ಟಲ್ಲ ಎಂದರು.

ನನಗೆ ಜೆಡಿಎಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಈ ಮೂರು ಆಯ್ಕೆಗಳಿವೆ. ಜನಾಭಿಪ್ರಾಯ ಸಂಗ್ರಹಿಸಿ ಪಕ್ಷದ ಆಯ್ಕೆ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಮುಗಿದು ಹೋಗಿದೆ. ಮಂಚ, ಬೆಡ್, ದಿಂಬು ಯಾರಿಗೆ ಏನ್ ಬೇಕು ಅದನ್ನು ತೆಗೆದುಕೊಂಡು ಹೋಗ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಹೇಳಿದರು.

- Advertisement -

Latest Posts

Don't Miss