Saturday, July 5, 2025

Latest Posts

Bangalore : ನನ್ನ ಮೇಲೆ FIR ಹಾಕಿ ಎಂದು ಎಂ ಪಿ ರೇಣುಕಾಚಾರ್ಯ ಮನವಿ..!

- Advertisement -

ಬೆಂಗಳೂರು : ಶಾಸಕ ಎಂ ಪಿ ರೇಣುಕಾಚಾರ್ಯ(MLA M.P Renukacharya)ತಮ್ಮ ಮೇಲೆ FIR ಹಾಕಿ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ (Home Minister Araga Gyannendra)ರವರಿಗೆ ಮನವಿಯನ್ನ ಮಾಡಿದ್ದಾರೆ. ಹೊನ್ನಾಳಿ (Honnali)ತಾಲೂಕಿನ ಬಲಮುರಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದ ಕಾರಣ, ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಮೂಲಕ ಮಾನ್ಯ ಗೃಹ ಮಂತ್ರಿಗಳಿಗೆ ತನ್ನ ಮೇಲೆ FIR ಹಾಕಿ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ನವರಂತೆ ಬಂಡತನ ಪ್ರದರ್ಶಿಸುವುದಿಲ್ಲ, ನಾನು ಮಾಡಿದ್ದು ತಪ್ಪು, ಅದು ನನ್ನ ಅರಿವಿಗೆ ಬಂದ ಕೂಡಲೇ ನಿನ್ನೆಯೇ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದ್ದೇನೆ. ನಾಡಿನ ಜನತೆ ಹಾಗೂ ಪಕ್ಷದ ಮುಖಂಡರು, ಎಲ್ಲರೂ ಇದನ್ನು ಖಂಡಿಸಿದ್ದಾರೆ. ಇದರಿಂದ ಪಕ್ಷಕ್ಕೂ ಮುಜುಗರವಾಗಿದೆ. ಆದ್ದರಿಂದ ಮತ್ತೊಮ್ಮೆ ಜನತೆಯಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದು ಹೇಳಿದರು. ಆದರೆ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಯೋಜನೆಯ ಪಾದಯಾತ್ರೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಕೋವಿಡ್ ಹೆಚ್ಚಿನ ಮಟ್ಟದಲ್ಲಿ ಹರಡುವ ಸಂಭವವಿದೆ ಎಂದು ಹೇಳಿದರು. ಹಾಗೆಯೇ ಇಂದು ಸಿದ್ದರಾಮಯ್ಯ(Siddaramaiah) ಹಾಗೂ ಡಿ ಕೆ ಶಿವಕುಮಾರ್(D K Sivakumar) ನನ್ನ ವಿರುದ್ಧ ಆರೋಪ ಮಾಡುತ್ತಾ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ವಿಡಿಯೋ ಮಾಡಿಸಿದ್ದಾರೆ, ಕೇಸ್ ಹಾಕಿ ಎಂದು ಹೇಳುತ್ತೀರಲ್ಲ, ಹೊನ್ನಾಳಿ ನ್ಯಾಮತಿ ಜನ ನನ್ನ ಸುತ್ತಕೋಟೆ ಕಟ್ಟಿದ್ದಾರೆ , ಕ್ಷೇತ್ರದ ಜನ ಹೇಳಿದರೆ ನಾನು ಬಾವಿಗೆ ಬೀಳುವುದಕ್ಕೂ ತಯಾರಿದ್ದೇನೆ. ನನ್ನ ಕ್ಷೇತ್ರದ ಜನ ಏನು ಹೇಳುತ್ತಾರೆ ಅದನ್ನು ಮಾಡಲು ನಾನು ತಯಾರಾಗಿದ್ದೇನೆ. ರಾಜಕಾರಣ ಮಾಡುವ ಸಂದರ್ಭದಲ್ಲಿ ನಾನು ರಾಜಕಾರಣ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

- Advertisement -

Latest Posts

Don't Miss