Sunday, December 22, 2024

Latest Posts

ಬಾರಿ ಮೊತ್ತಕ್ಕೆ ಮಾರಾಟವಾದ ಮದಗಜ ಹಿಂದಿ ಡಬ್ಬಿಂಗ್ ರೇಟ್ಸ್..!

- Advertisement -

ಸ್ಯಾಂಡಲ್‌ವುಡ್‌: ಡಿಸೆಂಬರ್ ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಭ್ರಮವೇ ನಡೆಯಲಿದೆ. ಬಿಗ್ ಬಜೆಟ್ ಸಿನಿಮಾಗಳು ಒಂದೊಂದು ಡೇಟ್ ಹಿಡಿದು ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿವೆ. ಬಿಡುಗಡೆಗೆ ಸಜ್ಜಾಗಿ ನಿಂತಿರುವ ಸಿನಿಮಾಗಳಲ್ಲಿ ಮದಗಜ ಒಂದು. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿರುವ ತಂಡ ಹಿಂದಿ ರೈಟ್ಸ್ ಅನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಿದೆ ಅನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಬೇಜಾನ್ ಸುದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಮದಗಜ ಸಿನಿಮಾ ಬಹು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಸಿನಿಮಾ ರಿಲೀಸ್‌ಗೆ ಇನ್ನು 9 ದಿನಗಳು ಬಾಕಿ ಇರುವಾಗಲೇ ದೊಡ್ಡ ಮೊತ್ತ ನಿರ್ಮಾಪಕ ಕೈ ಸೇರಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ನಿರ್ಮಿಸಿರುವ ‘ಮದಗಜ’ ಚಿತ್ರದ ಹಿಂದಿ ಭಾಷೆಯ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಕೆಲವು ದಿನಗಳ ಹಿಂದ  ಮಾತುಕತೆ ಮುಗಿದಿದ್ದು, ದೊಡ್ಡ ಮೊತ್ತವನ್ನೇ ನಿರ್ಮಾಪಕರು ಜೇಬಿಗಿಳಿಸಿಕೊಂಡಿದ್ದಾರೆ ಎನ್ನುತ್ತಿದೆ ಚಿತ್ರತಂಡ. ನಿರ್ಮಾಪಕರು ಹಾಗೂ ಕೊಳ್ಳುವವರ ಮಧ್ಯೆ ಹಗ್ಗ ಜಗ್ಗಾಟದಲ್ಲಿ ಒಂದೊಳ್ಳೆ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿದೆ ಎಂದು ಹೇಳಲಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸಿದ ಈ ಸಿನಿಮಾವನ್ನು ಹಿಂದಿ ನಿರ್ಮಾಪಕರು ಬರೋಬ್ಬರಿಗೆ 8 ಕೋಟಿ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಕೊರೊನಾ ಬಳಿಕ ಕನ್ನಡ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ. ಮದಗಜ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿದೆ. ಹೀಗಾಗಿ ಚಿತ್ರತಂಡ. “ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಸೇರಿ ಮದಗಜ ಸುಮಾರು 600 ರಿಂದ 700 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗುತ್ತೆ. ಇನ್ನು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 700 ರಿಂದ 800 ಸ್ಕ್ರೀನ್‌ನಲ್ಲಿ ರಿಲೀಸ್ ಮಾಡಬೇಕು ಅಂತ ಪ್ಲ್ಯಾನ್ ಆಗಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.’ಮದಗಜ’ ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಅನ್ನುವುದನ್ನು ಈಗಾಗಲೇ ಬಿಡುಗಡೆ ಮಾಡಿರುವ ದೃಶ್ಯ ತುಣುಕುಗಳು ಸಾಭೀತು ಮಾಡಿವೆ. ಮಾಸ್ ಸಿನಿಮಾಗಳನ್ನು ಇಷ್ಟ ಪಡುವವರಿಗೆ, ಶ್ರೀ ಮುರಳಿ ಅಭಿಮಾನಿಗಳಿಗೆ ಪವರ್‌ಫುಲ್ ಸಿನಿಮಾ ಗ್ಯಾರಂಟಿ  ಅಂತಿದೆ ಚಿತ್ರತಂಡ.

- Advertisement -

Latest Posts

Don't Miss