www.karnatakatv.net:ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ, ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಟೊಲ್ಲಿವುಡ್, ಕಾಲಿವುಡ್ನಲ್ಲು ನಿರೀಕ್ಷೆ ಮೂಡಿಸಿರುವ ಮದಗಜ ಚಿತ್ರವು ಡಿಸೆಂಬರ್ 3 ರಂದು ತೆರೆಕಾಣಲಿದೆ. ಇನ್ನೇನು ಕೆಲವೇದಿನಗಳು ಬಾಕಿಯಿದ್ದು, ಸಿನಿಮಾ ರಿಲೀಸ್‌ಗೆ ಬೇಕಾಗಿರುವ ಥಿಯೇಟರ್ ತಯಾರಿ ಹಾಗೂ ವಿತರಕರಕೊಂದಿಗೆ ಚಿತ್ರ ವ್ಯಾಪಾರ ಬಗ್ಗೆ ಮಾತುಕತೆ ನಡೆಯುತ್ತಿದೆ. ಮತ್ತೊಂದು ಕಡೆ ಸಿನಿಮಾ ಡಬ್ಬಿಂಗ್ ರೈಟ್ಸ್ ವ್ಯವಹಾರ ಕೂಡ ನಡೆಯುತ್ತಿದೆ.
ಪಕ್ಕ ಮಾಸ್ ಸಿನಿಮಾ ಇದಾಗಿದ್ದು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ. ಮೂರು ಭಾಷೆಗಳಲ್ಲಿ ಒಂದೆಬಾರಿ ರಿಲೀಸ್ ಮಾಡಲು ಮುಂದಾಗಿರುವ ಚಿತ್ರತಂಡ ಹಿಂದಿ ರೈಟ್ಸ್ ಅನ್ನು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಅನ್ನುವಂತಹ ಸುದ್ದಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ.
ಮೊದಲಬಾರಿ ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾವೊಂದು ಏಕಕಾಲಕ್ಕೆ ಹಲವು ಭಾಷೆಗೆ ಡಬ್ ಆಗಿ ಪ್ರಸಾರ ವಾಗಲು ರೆಡಿಯಾಗುತ್ತಿದೆ. ಈ ಮಧ್ಯೆ ಸಿನಿಮಾ ತೆರೆಕಾಣಲು ಇನ್ನು 9 ದಿನಗಳು ಬಾಕಿ ಇರುವಾಗಲೇ ದೊಡ್ಡ ಮೊತ್ತವೊಂದಕ್ಕೆ ಹಿಂದಿ ರೈಟ್ಸ್ ಸೇಲ್ ಆಗಿದ್ದು ಬರೋಬ್ಬರಿ 8 ಕೋಟಿಗೆ ಮಾರಾಟವಾಗಿದೆ ಎನ್ನುವಂತಹ ಮಾತುಗಳು ಸ್ಟಾçಂಗ್ ಆಗಿ ಕೆಳೊಬರುತ್ತಿವೆ. ರಾಬರ್ಟ್ ಸಿನಿಮಾವನ್ನು ನಿರ್ಮಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮದಗಜ ಸಿನಿಮಾವನ್ನು ನಿರ್ಮಿಸಿದ್ದು. ಕೆಲವು ದಿನಗಳ ಹಿಂದಷ್ಟೇ ಇದರ ಬಗ್ಗೆ ಮಾತುಕತೆ ಮುಗಿದಿದ್ದು, ದೊಡ್ಡ ಮೊತ್ತವನ್ನೇ ನಿರ್ಮಾಪಕರು ಜೇಬಿಗಿಳಿಸಿಕೊಂಡಿದ್ದಾರೆ ಎನ್ನುತ್ತಿದೆ ಚಿತ್ರತಂಡ.
ಇನ್ನೂ ಚಿತ್ರತಂಡ ನೀಡುರುವ ಮಾಹಿತಿಯ ಪ್ರಕಾರ, ‘ಮದಗಜ’ ಚಿತ್ರ ಹಿಂದಿಗೆ ಭಾರಿ ಬೇಡಿಕೆ ಬಂದಿತ್ತು, ನಿರ್ಮಾಪಕರು ಹಾಗೂ ಕೊಳ್ಳುವವರ ಮಧ್ಯೆ ಬಹಳಕಾಲ ಮಾತುಕತೆಗಳೆ ನಡೆದಿದ್ದು ಒಂದೊಳ್ಳೆ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿದೆ ಎಂದು ಹೇಳಲಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸಿದ ಈ ಸಿನಿಮಾವನ್ನು ಹಿಂದಿ ನಿರ್ಮಾಪಕರು ಬರೋಬ್ಬರಿಗೆ 8 ಕೋಟಿ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಕೊರೊನಾ ಬಳಿಕ ಕನ್ನಡ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ.
ಇದೇ ಡಿಸೆಂಬರ್ ೩ಕ್ಕೆ ತೆರೆಕಾಣಲಿರೋ ಮದಗಜ ಚಿತ್ರ 1500ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ‘ಮದಗಜ’ ರಲೀಸ್ ಆಗುತ್ತಿದ್ದು, ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿದೆ ಚಿತ್ರತಂಡ ಹೀಗಾಗಿ ಬಹಳ ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳ ಸೆಟಪ್ ಮಾಡಿದೆ ಚಿತ್ರತಂಡ. ” ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಸೇರಿ ಮದಗಜ ಸುಮಾರು 6000 ರಿಂದ 700 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗುತ್ತೆ. ಇನ್ನು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 700 ರಿಂದ 800 ಸ್ಕ್ರೀನ್‌ನಲ್ಲಿ ರಿಲೀಸ್ ಮಾಡಬೇಕು ಎಂಬ0ತಹ ಪ್ಲ್ಯಾನ್ ನಡೆಯುತ್ತಿದೆ.” ಎಂಬ ಮಾತುಗಳನ್ನು ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿಗಳನ್ನು ತಿಳಿಸಿದ್ದಾರೆ.
ಮಾಸ್ ಎಂಟರ್‌ಟೈನರ್ ಸಿನಿಮಾ ‘ಮದಗಜ’ ಅನ್ನುವುದನ್ನು ಈಗಾಗಲೇ ಬಿಡುಗಡೆ ಮಾಡಿರುವ ಟ್ರೆಲರ್ ಸಾಭೀತು ಮಾಡಿವೆ. ಇನ್ನೂ ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ನಟಿಸಿದ್ದು, ಮುದ್ದಾದ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು ಹಾಗೂ ಕೆ,ಜಿ,ಎಪ್ ಖ್ಯಾತಿಯ ಗರುಡ ರಾಮ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಚಿಕ್ಕಣ್ಣ ಮುರುಳಿಯವರ ಗೆಳೆಯನ ಪಾತ್ರದಲ್ಲಿ ಪ್ರೇಕ್ಷಕರನ್ನು 100% ಎಂಟರ್‌ಟೈನ್ ಮಾಡುವುದು ಖಚಿತ ಎನ್ನುತ್ತಿದೆ ಚಿತ್ರತಂಡ.
ರೂಪೇಶ್ ಫಿಲಂ ಬ್ಯೂರೋ ಕರ್ನಾಟಕ ಟಿವಿ.