Madhya Pradesh: ಬ್ಯಾಂಕ್‌ನಲ್ಲಿ ಆರಾಮವಾಗಿ ಕೆಲಸ ಮಾಡುತ್ತಿರುವಾಗ ಅಚಾನಕ್ ಆಗಿ ಹಾವು ಪ್ರತ್ಯಕ್ಷವಾದ್ರೆ ಹೇಗಿರತ್ತೆ..? ಇಂಥದ್ದೇ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಬ್ಯಾಂಕ್‌ನಲ್ಲಿ ನಡೆದಿದೆ.
ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಸಡನ್ ಆಗಿ ಹಾವು ಬ್ಯಾಂಕ್‌ಗೆ ನುಗ್ಗಿದ್ದು, ಅಲ್ಲಿನ ಸಿಬ್ಬದಂದಿಗಳು ಕಕ್ಕಾಬಿಕ್ಕಿಯಾಗಿ, ಸಿಕ್ಕ ಸಿಕ್ಕ ಕಡೆ ಏರಿ ಕುಳಿತಿದ್ದಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತರಹೇವಾರಿ ಕಾಮೆಂಟ್ಸ್ ಬಂದಿದೆ. ಯಾರದ್ದೋ ಕೆಲಸ ಮಾಡೋದು ಬಾಕಿ ಇರಬೇಕು ಅದಕ್ಕಾಗಿ ಹಾವಿನ ರೂಪದಲ್ಲಿ ಗ್ರಾಹಕರು ಬಂದಿದ್ದಾರೆಂದು ಓರ್ವ ಹೇಳಿದರೆ, ಕ್ಯಾಮೆರಾ ಅಲೋವ್ ಇಲ್ಲಾ ಅಂತಾ ಬರೀ ಗ್ರಾಹಕರಿಗೆ ಹೇಳ್ತಾರೆ. ತಾವು ಬ್ಯಾಂಕ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡ್ತಾರೆ ಅಂತಾ ಮತ್ತೋರ್ವ ಹೇಳಿದ್ದಾನೆ.
Klaesh between snake and bank staff
pic.twitter.com/GCQps6T0oj— Ghar Ke Kalesh (@gharkekalesh) December 1, 2025

