Sunday, September 8, 2024

Latest Posts

Madhya Pradesh : ತನ್ನ ಸಂಬಳವನ್ನೇ ತಡೆಹಿಡಿದ ಐಎಎಸ್​ ಅಧಿಕಾರಿ..!

- Advertisement -

ಮಧ್ಯಪ್ರದೇಶ: ಸರ್ಕಾರದ ಎಷ್ಟೋ ಅಧಿಕಾರಿಗಳು ಕಚೇರಿಯತ್ತ ತಲೆ ಹಾಕುವುದೇ ಅಪರೂಪ. ಮಧ್ಯಪ್ರದೇಶದ ಜಬಲ್‌ಪುರದ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್ ಕರ್ಮವೀರ್ ಶರ್ಮ ತಾವು ಮುಗಿಸಬೇಕಾಗಿದ್ದ ಕೆಲಸ ಪೂರ್ತಿಯಾಗಿಲ್ಲವೆಂಬ ಕಾರಣಕ್ಕೆ ತಮ್ಮ ಸಂಬಳವನ್ನು ತಾವೇ ತಡೆಹಿಡಿದಿದ್ದಾರೆ. ಜನರ ದೂರು ಪರಿಹಾರ ಮಾಡುವಲ್ಲಿ ವಿಳಂಬವಾದ ಕಾರಣ ಅವರು ತಮ್ಮ ಸಂಬಳವನ್ನು ತಡೆಹಿಡಿದಿದ್ದಾರೆ.

ಕೆಲಸ ಪೂರ್ಣಗೊಳ್ಳದ ಕಾರಣ ಅಧಿಕಾರಿಗಳು ತಮ್ಮ ಸಿಬ್ಬಂದಿಯ ವೇತನವನ್ನು ತಡೆಹಿಡಿದಿರುವ ಹಲವು ನಿದರ್ಶನಗಳಿವೆ. ಆದರೆ ಮಧ್ಯಪ್ರದೇಶದ ಜಬಲ್‌ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ತಮ್ಮ ಸ್ವಂತ ಸಂಬಳವನ್ನು ತಡೆಹಿಡಿದು ಅನೇಕರನ್ನು ಆಶ್ಚರ್ಯಗೊಳಿಸಿದ್ದಾರೆ. ಸಿಎಂ ಸಹಾಯವಾಣಿ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುವವರೆಗೆ ತಮ್ಮ ಸಂಬಳ ವಿತರಣೆಯನ್ನು ತಡೆಹಿಡಿಯಲಾಗಿದೆ ಎಂದು ಜಬಲ್‌ಪುರ ಜಿಲ್ಲಾಧಿಕಾರಿ ಕರ್ಮವೀರ್ ಶರ್ಮಾ ಹೇಳಿದ್ದಾರೆ. ತಮ್ಮ ಸಂಬಳವನ್ನು ಮಾತ್ರವಲ್ಲದೆ ಇಡೀ ಇಲಾಖೆಯ ಅಧಿಕಾರಿಗಳ ವೇತನವನ್ನು ಸಹ ತಡೆಹಿಡಿಯುವ ಮೂಲಕ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸದ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ. 100 ದಿನಗಳಿಗಿಂತ ಹೆಚ್ಚು ಕೆಲಸ ಬಾಕಿಯಿರುವ ಪ್ರಕರಣಗಳಲ್ಲಿ, ಸಮಸ್ಯೆಗಳನ್ನು ಪರಿಹರಿಸುವವರೆಗೆ ಅಧಿಕಾರಿಗಳು ತಮ್ಮ ವೇತನವನ್ನು ಪಡೆಯುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಅಲ್ಲದೆ, ಅವರ ಎಲ್ಲಾ ಇನ್‌ಕ್ರಿಮೆಂಟ್‌ಗಳನ್ನು ತಡೆಹಿಡಿಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕರ್ಮವೀರ್ ಶರ್ಮಾ ಮಾತನಾಡಿ, ಸಿಎಂ ಸಹಾಯವಾಣಿ ವ್ಯವಸ್ಥೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ವಿಚಾರಕ್ಕೆ ನಾನೇ ನೈತಿಕ ಹೊಣೆ ಹೊರುತ್ತೇನೆ ಮತ್ತು ಸ್ವಂತ ಸಂಬಳವನ್ನೂ ತಡೆಹಿಡಿಯಲು ನಿರ್ಧರಿಸಿದೆ. ಒತ್ತುವರಿ ನಂತರ ಇಲಾಖೆಯಲ್ಲಿ ಕಾಮಗಾರಿ ವಿಲೇವಾರಿ ಚುರುಕುಗೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

- Advertisement -

Latest Posts

Don't Miss