Sunday, September 8, 2024

Latest Posts

ಮಗುವನ್ನು ಎತ್ತಿಕೊಂಡೇ ಸಿಎಂ ಡ್ಯೂಟಿ ಮಾಡಿದ ಮಹಿಳಾ ಡಿಎಸ್ಪಿ

- Advertisement -


ಪ್ರಪಂಚದಲ್ಲಿ ತಾಯಿಗಿಂತ ಯಾವ ದೊಡ್ಡ ಯೋಧನೂ ಇಲ್ಲ ಅನ್ನೋ ಕೆಜಿಎಫ್ ಸಿನಿಮಾ ಡೈಲಾಗ್ ಎಂದೆಂದಿಗೂ ಪ್ರಸ್ತುತ. ಅದೆಂಥದ್ದೇ ಪರಿಸ್ಥಿತಿ ಇದ್ರೂ ತಾಯಿ ತನ್ನ ಮಗುವನ್ನು ರಕ್ಷಿಸ್ತಾಳೆ.ಗಾರೆ ಕೆಲಸ ಮಾಡ್ತಿದ್ರೂ ಸಹ ಮಗುವನ್ನು ಜೋಳಿಗೆಯಲ್ಲಿಟ್ಟುಕೊಂಡು ಕೆಲಸ ಮಾಡೋ ಅದೆಷ್ಟೋ ಮಹಿಳೆಯರನ್ನ ನೋಡಿರ್ತೀವಿ. ಹೀಗೆ ತಾಯಿ ಅನ್ನೋ ಕರುಣಾಮಯಿ, ವಾತ್ಸಲ್ಯದ ಸಾಗರದ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೇನೇ.


ಅಂದಹಾಗೆ ಇದೇ ರೀತಿ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮಗುವನ್ನು ಎತ್ತಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದು , ಇವರಿಗೆ ಇಡೀ ದೇಶವೇ ಸಲ್ಯೂಟ್ ಹೊಡೀತಿದೆ.
ಹೌದು, ಮಧ್ಯಪ್ರದೇಶದ ಧರ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೋನಿಕಾ ಸಿಂಗ್ ಸಿಎಂ ಡ್ಯೂಟಿಗೆ ತಮ್ಮ ಮಗುವಿನೊಂದಿಗೆ ಹಾಜರಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆಯಲಿರೋ ವಿಧಾನಸಭಾ ಉಪಚುನಾವಣೆಯ ಪ್ರಚಾರಕ್ಕೆ ಅಂತ ಅ.20ರಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬಂದಿದ್ರು. ಈ ವೇಳೆ ಅಲಿರಾಜ್ ಪುರದ ಹೆಲಿಪ್ಯಾಡ್ ಸೆಕ್ಯೂರಿಟಿ ಡ್ಯೂಟಿಯ ಜವಾಬ್ದಾರಿ ಮೋನಿಕಾ ಸಿಂಗ್ ರವರಿಗೆ ವಹಿಸಲಾಗಿತ್ತು.
ಇದಕ್ಕಾಗಿ ಅವರು ಅಂದು ಬೇಗನೆ ಡ್ಯೂಟಿಗೆ ಬರಬೇಕಿತ್ತು. ಇದಕ್ಕಾಗಿ ಅಂದು ಬೇಗ ಎದ್ದು ಮೋನಿಕಾ ರೆಡಿಯಾಗ್ತಿದ್ರು. ಆದ್ರೆ ಇದೇ ವೇಳೆ ಅವರ ಒಂದೂವರೆ ವರ್ಷದ ಮಗು ಮಯೀಶಾ ಕೂಡ ಎದ್ದುಬಿಟ್ಟಿದ್ದಾಳೆ. ಇದರ ಮುನ್ನಾ ದಿನವೂ ಕೂಡ ಮೋನಿಕಾ ಹೀಗೆಯೇ ಬೆಳಗ್ಗೆ ಎದ್ದು ಕರ್ತವ್ಯಕ್ಕೆ ತೆರಳಿದ್ರು. ಇದನ್ನೇ ನೆನಪಿಟ್ಟುಕೊಂಡ ಪುಟ್ಟ ಕಂದ ಮಯೀಶಾ, ಅಮ್ಮ ಇವತ್ತೂ ನನನ್ನನ್ನು ಬಿಟ್ಟು ಹೋಗ್ತಿದ್ದಾಳೆ ಅಂತ ಅಳೋದಕ್ಕೆ ಶುರುವಿಟ್ಟುಕೊಂಡಿತ್ತು. ಏನೇ ಮಾಡಿದ್ರೂ ಪುಟ್ಟ ಕಂದ ಅಳೋದನ್ನ ಮಾತ್ರ ನಿಲ್ಲಿಸಿರಲಿಲ್ಲ.

ಅದಾಗಲೇ ಕರ್ತವ್ಯಕ್ಕೆ ತೆರಳಬೇಕಿದ್ದ ಪೊಲೀಸ್ ಅಧಿಕಾರಿ ಮೋನಿಕಾರಿಗೆ ಮಗುವನ್ನ ಸುಧಾರಿಸೋದಕ್ಕೆ ಸಮಯವಿರ್ಲಿಲ್ಲ. ಹೀಗಾಗಿ ಮೋನಿಕಾ ನೇರವಾಗಿ ಮಗುವನ್ನು ಎತ್ತಿಕೊಂಡೇ ಕರ್ತವ್ಯಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಯ್ತು.
ಆದ್ರೆ ಮನೆಯಲ್ಲಿದ್ದ ಮಗುವನ್ನು ಬಿಟ್ಟು ಬರೋದು ಹೇಗೆ ಅಂತ ಯೋಚಿಸಿದ ಮೋನಿಕಾ ಸಿಂಗ್, ಕಡೆಗೆ ತಮ್ಮ ಒಂದೂವರೆ ವರ್ಷದ ಮಗುವನ್ನೂ ಎತ್ತಿಕೊಂಡು ಡ್ಯೂಟಿಗೆ ಬಂದಿದ್ದಾರೆ.


ಇನ್ನು ಅಂದು ತಮ್ಮ ಪುಟ್ಟ ಮಗುವಿನೊಂದಿಗೆ ಕರ್ತವ್ಯನಿರ್ವಹಿಸುತ್ತಿದ್ದ ಮೋನಿಕಾ ಸಿಂಗ್ ರನ್ನು ಕಂಡ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ರು.ಇನ್ನು ಮೋನಿಕಾ ತಮ್ಮ ಪುಟ್ಟ ಮಗುವನ್ನು ಎತ್ತಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೂಡ ಬೆಂಬಲಿಸಿದ್ರು. ಹೀಗಾಗಿ ಮೋನಿಕಾ ತಮ್ಮ ಪುಟ್ಟ ಮಗುವನ್ನ ಬೇಬಿ ಪೌಚ್ ನಲ್ಲಿಟ್ಟುಕೊಂಡು ಡ್ಯೂಟಿಗೆ ಹಾಜರಾಗಿದ್ರು.
ಸದ್ಯ ಮೋನಿಕಾ ಸಿಂಗ್ ರ ಈ ವಿಡಿಯೋ ದೇಶಾದ್ಯಂತ ವೈರಲ್ ಆಗ್ತಿದ್ದು, ಇನ್ನು ತಾಯಿಗೆ ಮಗು ಎಂದಿಗೂ ಭಾರವಾಗೋದಿಲ್ಲ ಅನ್ನೋದನ್ನ ಮತ್ತೊಮ್ಮೆ ಈ ಮಹಿಳಾ ಪೊಲೀಸ್ ಅಧಿಕಾರಿ ಪ್ರೂವ್ ಮಾಡಿದ್ದಾರೆ.

ಬ್ಯೂರೋ ರಿಪೋರ್ಟ್- ಕರ್ನಾಟಕ ಟಿವಿ

- Advertisement -

Latest Posts

Don't Miss