Sunday, February 23, 2025

Latest Posts

Mahashivaratri 2025: ಶಿವರಾತ್ರಿ ಜಾಗರಣೆ ಮಹತ್ವ! ಉಪವಾಸದ ಅರ್ಥ ಏನು?

- Advertisement -

Spiritual: ಇದೇ ತಿಂಗಳ ಫೆಬ್ರವರಿ 26ರಂದು ಮಹಾಶಿವರಾತ್ರಿ ಇದ್ದು, ಈ ಬಗ್ಗೆ ಈಗಾಗಲೇ ನಿಮಗೆ ಇದರ ಬಗ್ಗೆ ಹಲವು ಮಾಹಿತಿ ನೀಡಿದ್ದೇವೆ. ಅದೇ ರೀತಿ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು, ಶಿವರಾತ್ರಿಯಂದು ಏಕೆ ಉಪವಾಸ ಮಾಡಬೇಕು, ಏಕೆ ಜಾಗರಣೆ ಮಾಡಬೇಕು ಎಂದು ವಿವರಿಸಿದ್ದಾರೆ.

ನಮಸ್ಕಾರ ಪ್ರಿಯೋ ಭಾನುಃ, ಜಲಧಾ ಪ್ರಿಯೋ ಶಿವಃ, ಅಲಂಕಾರ ಪ್ರಿಯೋ ಕೃಷ್ಣಃ, ನೈವೇದ್ಯ ಪ್ರಿಯೋ ಗಣಾಧಿಪತೀ ಅನ್ನೋ ಮಾತಿನಂತೆ, ಗಣೇಶನಿಗೆ ನೈವೇದ್ಯ, ಕೃಷ್ಣನಿಗೆ ಅಲಂಕಾರ, ಸೂರ್ಯನಿಗೆ ನಮಸ್ಕಾರ ಇಷ್ಟವಿರುವ ಹಾಗೆ, ಶಿವನಿಗೆ ಪ್ರಿಯವಾಗಿದ್ದು ಜಲಾಭಿಷೇಕ. ಶಿವನಿಗೆ ಹಲವು ವಸ್ತುಗಳಿಂದ ಅಭಿಷೇಕ ಮಾಡಲಾಗುತ್ತದೆ. ಅದರಲ್ಲೂ ಶಿವನಿಗೆ ಯಾವ ಅಭಿಷೇಕವನ್ನೂ ಮಾಡಲು ಸಾಧ್ಯವಿಲ್ಲ ಎನ್ನುವವರು ನೀರಿನಿಂದಾದರೂ ಅಭಿಷೇಕ ಮಾಡಬಹುದು.

ಆದರೆ ಶಿವನಿಗೆ ಆಯಾ ಕಾಲದಲ್ಲಿ ಆಯಾ ರೀತಿಯ ಅಭಿಷೇಕ ಮಾಡಲಾಗುತ್ತದೆ. ಹಾಲು, ತುಪ್ಪ, ಬೆಣ್ಣೆ, ಹಣ್ಣು, ಒಣಹಣ್ಣು, ಭಸ್ಮ, ಮೊಸರು, ಎಳನೀರು, ನೀರು ಹೀಗೆ ಹಲವು ದ್ರವಗಳಿಂದ ಅಭಿಷೇಕ ಮಾಡಲಾಗುತ್ತದೆ. ಹಾಗಾಗಿ ಶಿವರಾತ್ರಿಯಂದು ಸೂರ್ಯೋದಯಕ್ಕೂ ಮುನ್ನ ಎದ್ದು, ಸ್ನಾನಾದಿಗಳನ್ನು ಮಾಡಿ, ಪೂಜೆ ಮಾಡಬೇಕು. ಬಳಿಕ ನಿಮ್ಮ ಬಳಿ ಸಾಧ್ಯವಾದ ಹಾಗೆ ಉಪವಾಸ ಮಾಡಬೇಕು.

ಶಿವನಾಮಸ್ಮರಣೆ, ಉಪವಾಸ, ಜಾಗರಣೆ ಇವೆಲ್ಲವೂ ಶಿವರಾತ್ರಿಯ ಆಚರಣೆಯ ಭಾಗ. ಗುರುಗಳು ಹೇಳುವ ಪ್ರಕಾರ, ಉಪುವಾಸವಿದ್ದಾಗ, ನೀರು ಹಾಲಿನ ಸೇವನೆಯಷ್ಟೇ ಮಾಡಬೇಕು. ಹಣ್ಣು, ಅವಲಕ್ಕಿ ಸೇವನೆ ಸೇರಿ ಹಲವು ಆಹಾರಗಳ ಸೇವನೆ ಮಾಡುವ ಹಾಗಿಲ್ಲ ಎಂಬುವುದು ಪದ್ಧತಿ. ಉಪವಾಸವೆಂದರೆ, ದೇವರಿಗೆ ಹತ್ತಿರವಾಗುವ ಕೆಲಸ. ನಿಮ್ಮ ಹೊಟ್ಟೆ ತುಂಬಿಕೊಂಡೇ ಇದ್ದರೆ, ನೀವು ದೇವರಿಗೆ ಹತ್ತಿರವಾಗಲು ಸಾಧ್ಯವೇ ಇಲ್ಲ. ಹಾಗಾಗಿ ಉಪವಾಸ ಮಾಡುವ ಮೂಲಕ ನೀವು ದೇವರಿಗೆ ಹತ್ತಿರವಾಗುತ್ತೀರಿ ಎಂಬುದು ಶಿವರಾತ್ರಿಯ ನಿಯಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss