Political News: ಹುಬ್ಬಳ್ಳಿ : ಬಿಜೆಪಿ ಭದ್ರಕೋಟೆಯಾದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕೆಲವೊಂದು ಕಾಮಗಾರಿಗಳು ಸ್ಥಗಿತಗೊಳ್ಳುವುದಕ್ಕೆ, ಹಿಂದಿನ ಶಾಸಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾರಣವೆಂದು ಹಾಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಪರೋಕ್ಷವಾಗಿ ಆರೋಪ ಮಾಡಿದ್ದರು. ಆದ್ರೆ ಜಗದೀಶ್ ಶೆಟ್ಟರ್ ಅವರನ್ನು ಕೇಳಿದ್ರೆ ಅದು ನಾನು ಶಾಸಕ ಇದ್ದಾಗ ತಂದಿದ ಅನುದಾನ, ಅದನ್ನ ಬೇರೆ ರೀತಿಯ ಕೆಲಸ ಮಾಡಿಸುತ್ತಿದ್ದೇನೆ. ಹೊಸ ಸರ್ಕಾರ ಬಂದಿದೆ ಹೋಗಿ ಒಂದು ರೂಪಾಯಿ ಮಂಜೂರು
ಮಾಡಿಸಿಕೊಂಡು ಬನ್ನಿ. ಇದಕ್ಕೆ ತಾಕತ್ತು ಇಲ್ಲ, ತಾಕತ್ತು ಇಲ್ಲದೆ ಸುಮ್ಮನೆ ಜಗದೀಶ್ ಶೆಟ್ಟರ್ ಮೇಲೆ ಆರೋಪ ಮಾಡತ್ತಿರಿ ಎಂದು ಹಾಲಿ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ದಿನದಂದು ಶಾಸಕ ಟೆಂಗಿನಕಾಯಿ ಅವರು, ಸೆಂಟ್ರಲ್ ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳು ಸ್ಥಗಿತಗೊಂಡಿವೆ. ಇದಕ್ಕೆ ಮೂಲ ಕಾರಣ ಜಗದೀಶ್ ಶೆಟ್ಟರ್ ಎಂದು ಆರೋಪ ಮಾಡಿದ್ದರು. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಹೊರ ಹಾಕುತ್ತೇನೆ ಎಂದಿದ್ದರು. ಆದ್ರೆ ಈ ವಿಷಯದ ಬಗ್ಗೆ ಶೆಟ್ಟರ್ ಅವರನ್ನು ಕೇಳಿದ್ರೆ, ಹುಬ್ಬಳ್ಳಿಯಲ್ಲಿ ಯಾರೇ ಜೋರಾಗಿ ಕೆಮ್ಮಿದರು ಅದಕ್ಕೆ ಜಗದೀಶ್ ಶೆಟ್ಟರ್ ಕಾರಣನಾ? ಇದು ಚಿಲ್ಲರೆ ರಾಜಕಾರಣ, ಮಹೇಶ್ ಟೆಂಗಿನಕಾಯಿ ರೆಡಿ ಮೇಡ್ ಕ್ಷೇತ್ರ ತೆಗೆದುಕೊಂಡಿದ್ದಾರೆ.
ನಾನು ಈಗಾಗಲೇ ಸಾಕಷ್ಟು ಅನುದಾನ ತಂದಿದ್ದೆನೆ. ಇದು ನನ್ನ ಪ್ರೀತಿ ಕ್ಷೇತ್ರ ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಏನು ಬೇಕು ಅದನ್ನು ಮಾಡುವೆ. ಕ್ಷೇತ್ರಕ್ಕೆ ಮಂಜೂರಾದ ಅನುದಾನ ನಿಲ್ಲಿಸುವ ಪ್ರವೃತ್ತಿ ನನ್ನದಲ್ಲಾ. ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಕಾಮಗಾರಿ ನಿಂತಿರಬಹದು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಹತ್ತು ಕೋಟಿ ಅನುದಾನ ತನ್ನಿ ಹಿಂದೆ ಮಂಜೂರಾಗಿದ್ದಕ್ಕೆ ಬಡಿದಾಡಬೇಡಿ ಎಂದು ಮೊದಲ ಬಾರಿ ಶಾಸಕ ಮಹೇಶ್ ಟೆಂಗಿನಕಾಯಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ನಿಮ್ಮ ನಿಮ್ಮ ರಾಜಕಾರಣದಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ಹಾಳು ಮಾಡಬಾರದು. ಜನರಿಗೆ ನೆಮ್ಮದಿ ಜೀವನ ಕಲ್ಪಿಸಿ ಕೊಡಿ ಅಷ್ಟೇ ಸಾಕು.
ಡಿಸಿಎಂ ಡಿಕೆಶಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಇಟ್ಟ ಬೇಡಿಕೆಗಳಿವು..




